ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಸಾಮಾಜಿಕ ಕಾರ್ಯಕರ್ತೆ, ವೈದ್ಯೆ ಡಾ. ಸೋನಾಲಿ ಸರ್ನೋಬತ್ ನೇತೃತ್ವದ ನಿಯತಿ ಫೌಂಡೇಶನ್ ಕೊರೋನಾ ಸಂಕಷ್ಟಕ್ಕೆ ಸ್ಪಂದಿಸುವ ಕಾಯಕವನ್ನು ಮುಂದುವರಿಸಿದೆ.
ಗುರುವಾರ ಡಾ.ಸೋನಾಲಿ ಸರ್ನೋಬತ್ ಹಾಗೂ ಭಾಗ್ಯಶ್ರೀ ಕೋಕಿತ್ಕರ್ ಜ್ಯೋತಿನಗರದ ವಿಕಲಚೇತನರಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸಿದರು.
ಜ್ಯೋತಿನಗರ ಅತ್ಯಂತ ಕೊಳಚೆ ಪ್ರದೇಶವಾಗಿದ್ದು, ಸ್ವಚ್ಛತೆ ಎನ್ನುವುದೇ ಕಾಣಸಿಗದಂತಿದೆ. ಇಲ್ಲಿ ಅನೇಕರು ನಡೆಯಲಾರದ ಸ್ಥಿತಿಯಲ್ಲಿದ್ದಾರೆ. ಅನೇಕರು ವಿವಿಧ ರೀತಿಯ ದೈಹಿಕ ಊನತೆಯಿಂದ ಬಳಲುತ್ತಿದ್ದಾರೆ. ಈ ಹಿಂದೆ ಇಲ್ಲಿ ಡಾ.ಸೋನಾಲಿ ಸರ್ನೋಬತ್ ಆರೋಗ್ಯ ಶಿಬಿರದ ಮೂಲಕ ಜಾಗೃತಿ ತರುವ ಪ್ರಯತ್ನ ಮಾಡಿದ್ದರು.
Home add -Advt
ಡಾ.ಸೋನಾಲಿ ಸರ್ನೋಬತ್
ಅಧಿಕಾರಿಗಳು ಜ್ಯೋತಿನಗರದ ಸಮಸ್ಯೆಯ ಕಡೆಗೆ ಗಮನಹರಿಸಬೇಕು. ಇಲ್ಲಿನ ಜನರ ಆರೋಗ್ಯ, ಜನರ ಜೀವನ ಮಟ್ಟ ಉನ್ನತಿಗೆ ಪ್ರಯತ್ನಿಸಬೇಕು