Belagavi NewsBelgaum News

*ಅವಿಶ್ವಾಸ ಗೊತ್ತುವಳಿ ಅಂಗೀಕಾರ: ಬಿಜೆಪಿಗೆ ಬಿಗ್ ಶಾಕ್*

ಪ್ರಗತಿವಾಹಿನಿ ಸುದ್ದಿ: ಅಥಣಿ: ರಾಜ್ಯದಲ್ಲಿ ಅತಿ ದೊಡ್ಡ ಗ್ರಾಮ ಪಂಚಾಯತಿಯಲ್ಲಿ ಒಂದಾಗಿರುವ ಅಥಣಿ ತಾಲೂಕಿನ ಸಂಕೊನಟ್ಟಿ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿದ್ದ ಬಿಜೆಪಿ ಬೆಂಬಲಿತ ಸಂತೋಷ ಕಕಮರಿ ವಿರುದ್ದ ಸದಸ್ಯರು ಮಂಡಿಸಿರುವ ಅವಿಶ್ವಾಸ ಗೊತ್ತುವಳಿ ಸ್ವೀಕೃತ ಗೊಂಡಿತು.

ಒಟ್ಟು ೫೬ ಸದಸ್ಯರುಗಳಲ್ಲಿ ೪೨ ಜನ ಸದಸ್ಯರು ಅವಿಶ್ವಾಸ ಪರವಾಗಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು, ೧೪ ಜನ ಸದಸ್ಯರು ಅನುಪಸ್ಥಿತಿ ಉಳಿದಿದ್ದರು. ಒಂದು ವಾರದಿಂದ ೨೫ ಸದಸ್ಯರು ಸಂತೋಷ ಕಕಮರಿ ಬೆಂಬಲಿಸಿ ಪ್ರವಾಸಕ್ಕೆ ತೆರಳಿದ್ದರು. ಆದರೆ ಅವರುಗಳ ಜೊತೆಯಲ್ಲಿ ಇದ್ದವರಲ್ಲಿಯೇ ಐದು ಜನ ಬಂಡಾಯವೆದ್ದು ಪಕ್ಷಾಂತರಗೊಂಡ ಪರಿಣಾಮ ಹಿನ್ನಡೆ ಅನುಭವಿಸ ಬೇಕಾಯಿತು. ಬಿಜೆಪಿ ಪ್ರಮುಖರ ಸಹಕಾರ ದೊರೆಯದ್ದಕ್ಕೆ ಅಧಿಕಾರ ವಿರುವ ಸರಕಾರದ ಅನುದಾನದ ಭರವಸೆ ಮೇರೆಗೆ ಪಕ್ಷಾತೀತವಾಗಿ ಸದಸ್ಯರುಗಳು ಅವಿಶ್ವಾಸ ಪರ ಮತ ಚಲಾಯಿಸಿದರು ಎನ್ನಲಾಗುತ್ತಿದೆ.

ಈ ವೇಳೆ ಅಧಿಕಾರಿಗಳಾದ ಚಿಕ್ಕೋಡಿಯ ಎಸಿ ಸುಭಾಷ್ ಸಂಪಗಾವಿ, ಸಂಕೋನಟ್ಟಿ ಪಿಡಿಓ ಬೀರಪ್ಪ ಗಡಗಂಚಿ, ಅಥಣಿ ಕಂದಾಯ ನೀರೀಕ್ಷಕ ಶಿವಾನಂದ ಮೆಣಸಂಗಿ, ಎಮ್ ಎಮ್ ಮಿರ್ಜಿ, ಸಿಬ್ಬಂದಿಗಳಾದ ಅನೀಲ, ವಿಶಾಲ, ಮಲಯ್ಯ ಹೀರೆಮಠ ಸೇರಿದಂತೆ ಅನೇಕರಿದ್ದರು.

ಎರಡು ಗುಂಪುಗಳ ನಡುವೆ ಯಾವುದೇ ತರಹದ ಗಲಾಟೆಗೆ ಆಸ್ಪದ ಆಗದ ಹಾಗೆ ಪೋಲಿಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಅಥಣಿ ಪಿಎಸ್ಆಯ್ ಶಿವಾನಂದ ಕಾರಜೋಳ, ಐಗಳಿ ಪಿಎಸ್ಆಯ್ ಹಾಡಕರ, ಸಿಬ್ಬಂದಿ ಶ್ರೀಧರ ಭಾಂಗಿ, ಮಹಾತೇಶ ಖೋತ, ಸುಧಾಕರ ಕಾಂಬಳೆ, ಸೂರ್ಯವಂಶಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button