Belagavi NewsBelgaum NewsKannada NewsKarnataka NewsNationalPolitics

*ಜಾನುವಾರುಗಳಿಗೆ ಸಿಗದ ಮೇವು: ಕಂಟಕವಾದ ಜೀವ ನದಿ*

ಪ್ರಗತಿವಾಹಿನಿ ಸುದ್ದಿ: ಕಳೆದ ಒಂದು ವಾರದಿಂದ ಕೃಷ್ಣ ನದಿ ಪ್ರವಾಹದ ನೀರು ಅನೇಕ ಗ್ರಾಮಗಳ ತೋಟ ಹಾಗೂ ವಸತಿ ಪ್ರದೇಶಕ್ಕೆ ನುಗ್ಗಿದ್ದು ಜನರು ತಮ್ಮ ಜಾನುವಾರು ಸಹಿತ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಂಡಿದ್ದಾರೆ. 

ಜನರ ಕಾಳಜಿ ವಹಿಸಿದ ತಾಲೂಕಡಳಿತ ಜಾನುವಾರುಗಳಿಗೆ ಮೇವು ನೀಡಲು ವಿಳಂಬ ತೋರುತ್ತಿರುವ ಆರೋಪ ಕೇಳಿ ಬಂದಿದೆ. ಕಾಗವಾಡ ತಾಲೂಕಿನ‌ ಕೃಷ್ಣ ಕಿತ್ತೂರು, ಬನಜವಾಡ, ಕಾತ್ರಾಳ, ಮಳವಾಡ, ಕುಸುನಾಳ, ಜೋಗುಳ, ಶಹಪುರ್, ಮಂಗಾವತಿ ಗ್ರಾಮಗಳ ಜನರು ಜಾನುವಾರುಗಳಿಗೆ ಮೆವು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ಜಾನುವಾರುಗಳಿಗೆ 7 ಕೆಜಿ ಮೇವು ನೀಡುತ್ತಿದ್ದು ಮೇವಿಲ್ಲದೆ ಜಾನುವಾರುಗಳು ಪರಿತಪಿಸುತ್ತಿವೆ ಎಂದು ನೆರೆ ಸಂತ್ರಸ್ತರು ನದಿ ನೀರಿನಲ್ಲೇ ಮೇವಿಗಾಗಿ ಹುಡುಕಾಟ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ನಮ್ಮ ಜಾನುವಾರುಗಳಿಗೆ ವ್ಯವಸ್ಥಿತ ಮೇವು ಹಾಗೂ ಪಶು ಆಹಾರ ಕೊಡುವಂತೆ ನೆರೆ ಸಂತ್ರಸ್ತರು ಮನವಿ ಮಾಡಿದ್ದಾರೆ.

ಉತ್ತರಕೊಡಿ ಸಿದ್ದರಾಮಯ್ಯ: ಆರ್. ಅಶೋಕ ಡಬಲ್ ಟ್ವೀಟ್

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button