ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅವಾಂತರದಿಮ್ದ ಸೃಷ್ಟಿಯಾದ ಪ್ರವಾಹ ಸಂಕಷ್ಟ ಹಿನ್ನೆಲೆಯಲ್ಲಿ ರಾಜಕಾಲುವೆ, ಕೆರೆಗಳ ಒತ್ತುವರಿ ಮಾಡಿಕೊಂಡು ನಿರ್ಮಿಸಲಾದ ಕಟ್ಟಡಗಳನ್ನು ಬಿಬಿಎಂಪಿ ತೆರವು ಕಾರ್ಯಾಚರಣೆ ಮಾಡುತ್ತಿದ್ದು, ಬೃಹತ್ ಅಪಾರ್ಟ್ ಮೆಂಟ್, ಮನೆಗಳು, ಆಸ್ಪತ್ರೆ, ಶಾಲಾ ಕಟ್ಟಡಗಳನ್ನು ನೆಲಸಮ ಮಾಡಲಾಗುತ್ತಿದೆ.
ಒತ್ತುವರಿ ತೆರವು ವಿಚಾರವಾಗಿ ಮಾತನಾಡಿರುವ ಕಂದಾಯ ಸಚಿವ ಆರ್.ಅಶೋಕ್, ರಾಜಕಾಲುವೆ, ಕೆರೆ ಒತ್ತುವರಿ ತೆರವಿಗೆ ನೋಟೀಸ್ ಕೊಡುವ ಅಗತ್ಯವಿಲ್ಲ, ನೋಟೀಸ್ ಇಲ್ಲದೇ ನಿರ್ದಾಕ್ಷಿಣ್ಯವಾಗಿ ಕಟ್ಟಡ ತೆರವು ಮಾಡಬಹುದು ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ.
ಸುಮಾರು 40 ಐಟಿ ಬಿಟಿ ಕಂಪನಿಗಳಿಂದ ರಾಜಕಾಲುವೆ ಒತ್ತುವರಿಯಾಗಿದೆ. ತೆರವು ಕಾರ್ಯಕ್ಕೆ ತಡೆಕೋರಿ ಹಲವರು ಕೋರ್ಟ್ ಮೆಟ್ಟಿಲೇರಿದ್ದು, ನಾವು ಕೂಡ ತೆರವು ಕಾರ್ಯಕ್ಕೆ ತಡೆ ನೀಡದಂತೆ ಕೋರ್ಟ್ ಗೆ ಮನವಿ ಮಾಡುತ್ತಿದ್ದೇವೆ. ಅಧಿಕಾರಿಗಳು ಒಂದು ವಾರ ಒತ್ತುವರಿ ತೆರವು ಮಾಡಿ ನಿಲ್ಲಿಸುವಂತಿಲ್ಲ. ಒತ್ತುವರಿ ತೆರವು ಕಾರ್ಯ ನಿರಂತರವಾಗಿ ಮುಂದುವರೆಸಬೇಕು. ಬಡವರು ಶ್ರೀಮಂತರು ಎಂಬ ತಾರತಮ್ಯವಿಲ್ಲದೇ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು.
ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಈಗಗಾಲೇ ಹಲವು ಮನೆಗಳನ್ನು, ಆಸ್ಪತ್ರೆಗಳನ್ನು, ಶಾಲಾ ಕಟ್ಟಡ, ಕಚೇರಿ, ಹೋಟೆಲ್ ಗಳನ್ನು ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದ್ದಾರೆ. ಏಕಾಏಕಿ ಕಟ್ಟಡಗಳ ಕಾಂಪೌಂಡ್ ಗಳನ್ನು, ಕಟ್ಟಡಗಳನ್ನು ತೆರವುಗೊಳಿಸುತ್ತಿರುವುದರಿಂದ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ರೇನ್ ಬೋ ಡ್ರೈವ್ ಬಡಾವಣೆಯಲ್ಲಿನ 13 ವಿಲ್ಲಾ ಗಳಿಗೆ ಬಿಬಿಎಂಪಿ ನೋಟೀಸ್ ನೀಡಿದ್ದು, ಕಟ್ಟಡ ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
https://pragati.taskdun.com/politics/priyank-khargecm-basavaraj-bommaipsi-illigal-case/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ