Latest

ರೈಲ್ವೆ ಖಾಸಗೀಕರಣ ಯೋಚನೆ ಇಲ್ಲ -ಪಿಯೂಷ್ ಗೋಯಲ್ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿ, ನವದೆಹಲಿ :

ರೈಲ್ವೆಯನ್ನು ಖಾಸಗೀಕರಣಕ್ಕೊಳ ಪಡಿಸುವ ಯಾವುದೇ ಯೋಜನೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಸ್ಪಷ್ಟನೆ  ನೀಡಿದ್ದಾರೆ.

ವಿಶ್ವದ ಅತಿಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೇಸ್ ಅನ್ನು ಖಾಸಗೀಕರಣಗೊಳಿಸುವ ಸುದ್ದಿಯ ಬಗ್ಗೆ  ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದ ಸುರೇಂದ್ರನಾಥ್ ನಗರ್ ಕೇಳಿದ ಪ್ರಶ್ನೆಗೆ ಪಿಯೂಶ್  ಲಿಖಿತ ಸ್ಪಷ್ಟನೆ ನೀಡಿದ್ದಾರೆ.

ತನ್ನ ಏಳು ಉತ್ಪಾದನಾ ಘಟಕವನ್ನು ಇಂಡಿಯನ್ ರೈಲ್ವೆ, ರೋಲಿಂಗ್ ಸ್ಟಾಕ್ ಕಂಪೆನಿಗೆ ಸಲ್ಲಿಸುವ ಬಗ್ಗೆ ಪ್ರಸ್ತಾಪವಿರಿಸಿತ್ತು, ಇದಕ್ಕೆ ಕಾರ್ಮಿಕ ಒಕ್ಕೂಟದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

Home add -Advt

ರಾಜಧಾನಿ ಮತ್ತು ಶತಾಬ್ದಿ ಎಕ್ಸ್ ಪ್ರೆಸ್ ರೈಲುಗಳ ನಿರ್ವಹಣೆಯನ್ನು ಖಾಸಗಿ ಸಂಸ್ಥೆಗೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ ಎನ್ನುವ ಮಾತು ಕೇಳಿಬಂದಿತ್ತು. ಈಗ, ಖುದ್ದು ಸಚಿವರೇ ಈ ವಿಷಯವನ್ನು ತಳ್ಳಿಹಾಕಿದ್ದಾರೆ. ರೈಲ್ವೆಯಲ್ಲಿ ಒಂಬತ್ತು ಸಾವಿರ ಕಾನ್ಸ್ಟೇಬಲ್ ಹುದ್ದೆ ಖಾಲಿಯಿದ್ದು, ಅದನ್ನು ಭರ್ತಿ ಮಾಡುವ ಕೆಲಸ ಆರಂಭವಾಗಿದ್ದು, ಇದರಲ್ಲಿ ಶೇ. 50ರಷ್ಟನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಸಚಿವ ಪಿಯೂಶ್ ಹೇಳಿದ್ದಾರೆ.

Related Articles

Back to top button