ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –
ನಾವು 12 ಶಾಸಕರೂ ಒಗ್ಗಟ್ಟಾಗಿದ್ದೇವೆ. ನಮ್ಮಲ್ಲಿ ಒಡಕು ಮೂಡಿದೆ ಎನ್ನುವ ಸುದ್ದಿಯಾಗಲಿ, ಕೆಲವರು ವಾಪಸ್ ಬರುತ್ತಾರೆ ಎನ್ನುವ ಸುದ್ದಿಯಾಗಲಿ, ಯಾವುದೂ ನಿಜವಲ್ಲ ಎಂದು ಮುಂಬೈನಲ್ಲಿರುವ ಬಂಡಾಯ ಶಾಸಕರು ಪುನರುಚ್ಚರಿಸಿದ್ದಾರೆ.
ನಿನ್ನೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ದಂಡಿನ ಮಧ್ಯೆ ನಿಂತು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮತನಾಡಿದ್ದ ವಸತಿ ಸಚಿವ ಎಂ.ಟಿ.ಬಿ. ನಾಗರಾಜ ಉಪಸ್ಥಿತಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಮ್ಮ ಬಗ್ಗೆ ಅನಗತ್ಯವಾಗಿ ಗೊಂದಲ ಹುಟ್ಟಿಸುವ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ ನಾವೆಲ್ಲ ಒಟ್ಟಾಗಿಯೇ ಇದ್ದೇವೆ. ಇಂದು ರಾತ್ರಿಯ ಹೊತ್ತಿಗೆ ಸುಧಾಕರ ಕೂಡ ನಮ್ಮ ಜೊತೆ ಸೇರಲಿದ್ದಾರೆ ಎಂದು ತಿಳಿಸಿದರು.
ನಾಗರಾಜ ಮಾತನಾಡಿ, ಸುಧಾಕರ ಜೊತೆ ಮಾತನಾಡಿ ಅವರು ಒಪ್ಪಿದರೆ ರಾಜಿನಾಮೆ ಹಿಂದಕ್ಕೆ ಪಡೆಯುವುದಾಗಿ ನಾನು ನಿನ್ನೆ ಹೇಳಿದ್ದೆ. ಆದರೆ ಅಂತಹ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣದಿಂದ ನಮ್ಮ ನಿರ್ಧಾರದಿಂದ ಹಿದೆ ಸರಿಯುವುದಿಲ್ಲ ಎಂದರು.
ನಿನ್ನೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರಿಂದ ಸುತ್ತುವರಿದು ಮಾತನಾಡಿದ್ದ ನಾಗರಾಜ, ನಾನು ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ ಎಂದು ಹೇಳಿದ್ದರು. ಆದರೆ ರಾಜಿನಾಮೆ ಹಿಂತೆಗೆಯುವ ಬಗ್ಗೆ ಖಚಿತವಾಗಿ ಹೇಳಿರಲಿಲ್ಲ. ಇಂದು ಬೆಳಗ್ಗೆ ಅವರು ವಿಶೇಷ ವಿಮಾನದ ಮೂಲಕ ಮುಂಬೈ ತಲುಪಿದ್ದಾರೆ.
ವಿಶೇಷವೆಂದರೆ ನಾಗರಾಜ ಅವರನ್ನು ವಿಮಾನ ಹತ್ತಿಸಲು ಬಿಜೆಪಿಯ ಆರ್.ಅಶೋಕ ಬಂದಿದ್ದ ಫೋಟೋ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಇದನ್ನೂ ಓದಿ –
ಕಾಂಗ್ರೆಸ್ ನಲ್ಲೇ ಇರ್ತೀನಿ ಅಂದ್ರು, ರಾಜಿನಾಮೆ ವಾಪಸ್ ಬಗ್ಗೆ ಅಸ್ಪಷ್ಟತೆ
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ. ಹೆಚ್ಚಿನ ಸುದ್ದಿಗಳಿಗಾಗಿ prgativahini.com ನೋಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ