Kannada NewsKarnataka NewsLatest

ಬಿಜೆಪಿಯಿಂದ ಅಚ್ಛರಿಯ ಅಭ್ಯರ್ಥಿ ನಾಮಪತ್ರ!; ಸೂಚಕರ್ಯಾರು ಗೊತ್ತಾ?

ಸೂಚಕರಾಗಿ ಪ್ರಭಾಕರ ಕೋರೆ ಮತ್ತು ರಮೇಶ ಜಾರಕಿಹೊಳಿ ಹೆಸರು!!

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಮಂಗಳವಾರ (ಮಾ.23) ಇಬ್ಬರು ಅಭ್ಯರ್ಥಿಗಳು ಒಟ್ಟು ನಾಮಪತ್ರಗಳನ್ನು ಸಲ್ಲಿಸಿದ್ದಾರೆ‌.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ವೆಂಕಟೇಶ್ವರ ಮಹಾಸ್ವಾಮೀಜಿ ಅವರು ಮೂರು ನಾಮಪತ್ರಗಳನ್ನು ಸಲ್ಲಿಸಿದರು. ವಿಜಯಪುರ ಜಿಲ್ಲೆ ಚಡಚಣದವರಾದ ವೆಂಕಟೇಶ್ರವ ಸ್ವಾಮೀಜಿ ಪರಿಶಿಷ್ಟ ಜಾತಿಯವರಾಗಿದ್ದು, 2 ನಾಮಪತ್ರಗಳನ್ನು ಬಿಜೆಪಿ ಹೆಸರಲ್ಲಿ , ಒಂದು ನಾಮಪತ್ರವನ್ನು ಹಿಂದುಸ್ತಾನ ಜನತಾಪಾರ್ಟಿ ಹೆಸರಲ್ಲಿ ಸಲ್ಲಿಸಿದ್ದಾರೆ. ಡಾಯಪ್ರಭಾಕರ ಕೋರೆ ಮತ್ತು ರಮೇಶ ಜಾರಕಿಹೊಳಿ ಹೆಸರನ್ನು ಸೂಚಕರಾಗಿ ಉಲ್ಲೇಖಿಸಿದ್ದಾರೆ.

 

ಪಕ್ಷೇತರ ಅಭ್ಯರ್ಥಿಯಾಗಿ ಶ್ರೀಕಾಂತ್ ಪಡಸಲಗಿ ಅವರು ನಾಮಪತ್ರವನ್ನು ಸಲ್ಲಿಸಿದರು.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ನಾಮಪತ್ರಗಳನ್ನು ಸ್ವೀಕರಿಸಿದರು.

Related Articles

Back to top button