Kannada NewsLatest

ಯಕೃತ್ತು ವಿಕಾರ, ಥೈರಾಯ್ಡ್, ಕಿಡ್ನಿ ವೈಫಲ್ಯ ರೋಗಿಗಳಿಗೆ KLE ಆಯುರ್ವೇದ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಅಮದ್ಯಪ್ರಿಯರ ಯಕೃತ್ತು ವಿಕಾರ, ಥೈರಾಯ್ಡ್, ಮೂತ್ರಪಿಂಡ (ಕಿಡ್ನಿ) ವೈಫಲ್ಯ ಸಂಬಂದಿತರೋಗದಿಂದ ಬಳಲುವರೋಗಿಗಳಿಗೆ ಸ್ವಾತಂತ್ರೋತ್ಸವದ ಅಮೃತಮಹೋತ್ಸವ ಅಂಗವಾಗಿ ಉಚಿತ ತಪಾಸಣಾ ಶಿಬಿರವನ್ನು ಬೆಳಗಾವಿಯ ಶಹಾಪುರ ಕೆ ಎಲ್ ಇ ಆಯುರ್ವೇದ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.

ನಾಳೆ ಬುಧವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ 2:30ರಿಂದ ಸಂಜೆ 5 ಗಂಟೆಯವರೆಗೆ ಉಚಿತ ಆರೋಗ್ಯ ತಪಸಾಣೆ ಹಮ್ಮಿಕೊಳ್ಳಲಾಗಿದೆ.

ಯಕೃತ್ತು, ಥೈರಾಯಿಡ್ನಿಂದ ಬಳಲುವ ರೋಗಿಗಳಿಗೆ ಈ ಶಿಬಿರದಲ್ಲಿ ಆಸ್ಪತ್ರೆಯ ನುರಿತ ವೈದ್ಯರು ತಪಾಸಣೆ ಮಾಡಿ ಸೂಕ್ತ ಸಲಹೆ ನೀಡಲಿದ್ದಾರೆ.

ಮೂತ್ರಪಿಂಡ (ಕಿಡ್ನಿ) ವೈಫಲ್ಯ ಸಂಬಂಧಿಸಿದ ರೋಗಗಳಿಗೆ ದಿನಾಂಕ: 08/09/2022ರಂದು ಗುರುವಾರ ಮುಂಜಾನೆ 12.00 ರಿಂದ 1.30 ರವರೆಗೆ ಉಚಿತ ಸಲಹಾ ಶಿಬಿರವನ್ನುಹಮ್ಮಿಕೊಳ್ಳಲಾಗಿದೆ. ಈ ಶಿಬಿರಕ್ಕೆ ಬೆಳಗಾವಿಯ ಪ್ರಖ್ಯಾತ ಕಿಡ್ನಿ ವೈದ್ಯರು ತಪಾಸಣೆ ಮಾಡಿ ಸೂಕ್ತಸಲಹೆ ನೀಡಲಿದ್ದಾರೆ.

ಆಸಕ್ತರು ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಸರಕಾರಿ ನೌಕರರಿಗೆ CM ನೀಡಿದ ಮತ್ತೊಂದು ಕರೆ ಏನು?

https://pragati.taskdun.com/politics/cm-basavaraj-bommai7th-pay-commissioncotoberannounce/

 

https://pragati.taskdun.com/latest/kidny-sale-gang3-arrestedbangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button