*ಉತ್ತರ ಕರ್ನಾಟಕ ಅಭಿವೃದ್ದಿ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು: ಆರ್ ಅಶೋಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮಗ್ರ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು. ಕಳೆದ ಬಾರಿ ಕೊಟ್ಟಂತಹ ಭರವಸೆಗಳು ಯಾವೂ ಈಡೇರಿಲ್ಲ. ಈಕುರಿತು ಇಂದು ಅಧಿವೇಶನದಲ್ಲಿ ಚರ್ಚೆ ಮಾಡಲಿದ್ದೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಾಗಲೇ ನಮ್ಮ ಮುಖಂಡರ ಜೊತೆ ಸಭೆ ಮಾಡಿದ್ದೇನೆ. ಅನೇಕ ಇಲಾಖೆಗಳ ಕುರಿತು ಚರ್ಚೆ ಮಾಡುವ ಹಿನ್ನೆಲೆ ತಯಾರಿ ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಅವಶ್ಯಕವಿದೆ. ಆದ್ರೆ ಸರ್ಕಾರ ಒಂಬತ್ತು ದಿನಕ್ಕೆ ಅಧಿವೇಶನ ಮುಕ್ತಾಯ ಮಾಡುತ್ತಿದೆ. ನಾವು ಎಷ್ಟೇ ಹೋರಾಟ ಮಾಡಿದ್ರೂ ಸರ್ಕಾರಕ್ಕೆ ರಾಜ್ಯದ ಜನರ ಬಗ್ಗೆ ಯಾವುದೇ ಕಳಕಳಿ ಇಲ್ಲ. ಅಧಿವೇಶನ ಆದಷ್ಟು ಬೇಗ ಮುಕ್ತಾಯ ಮಾಡಿ ಓಡಿ ಹೋಗಬೇಕು ಅನ್ನೋ ಉದ್ದೇಶ ಇದೆ. ವಕ್ಫ್ ವಿಚಾರದಲ್ಲಿ ರೈತರು ಬೀದಿಗೆ ಬಂದಿದ್ದಾರೆ. ಸರ್ಕಾರ ಪಲಾಯನ ಮಾಡಿ ಓಡಿ ಹೋಗುವ ಉದ್ದೇಶ ಹೊಂದಿದೆ. ಇಂದು ಉತ್ತರ ಕರ್ನಾಟಕ ವಿಚಾರವಾಗಿ ಚರ್ಚೆ ಮಾಡುವ ಉದ್ದೇಶವಿದೆ. ವಿಜಯೇಂದ್ರ ಅವರ ವಿರುದ್ಧ ಕಾಂಗ್ರೆಸ್ ನವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್ ನವರ ಹೆಸರುಗಳೇ ಇವೆ. ಅದರಲ್ಲೇನು ವಿಜಯೇಂದ್ರ ಅವರ ಹೆಸರು ಇದೆಯಾ..? ಮುಡಾ, ವಾಲ್ಮೀಖಿ ಹಗರಣದಲ್ಲಿ ಕಾಂಗ್ರೆಸ್ ನವರು ಸಿಲುಕಿಕೊಂಡಿದ್ದಾರೆ. ಅದನ್ನ ವಿಷಯಾಂತರ ಮಾಡುವ ಉದ್ದೇಶದಿಂದ್ಲೇ ಸರ್ಕಾರ ಈ ರೀತಿ ವರ್ತನೆ ಮಾಡುತ್ತಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ