Latest

ಭೂಕಂಪನವಲ್ಲ; ಶಿವಮೊಗ್ಗ ಬಳಿ ಡೈನಮೈಟ್ ಸ್ಫೋಟ; 6 ಜನರ ಸಾವು

ಪ್ರಗತಿವಾಹಿನಿ ಸುದ್ದಿ, ಶಿವಮೊಗ್ಗ – ಶಿವಮೊಗ್ಗ ಬಳಿ ಡೈನಮೈಟ್ ಸ್ಫೋಟಗೊಂಡಿದ್ದು, 6ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವ ಶಂಕೆ ಇದೆ.

ಆ ಪ್ರದೇಶದಲ್ಲಿ ಆಗಿರುವುದು ಭೂಕಂಪನವಲ್ಲ, ಸ್ಫೋಟ ಎನ್ನುವುದು ಖಚಿತವಾಗಿದೆ.

ಶಿವಮೊಗ್ಗದ ಹುಣಸಗೋಡು ಬಳಿ ಕ್ರಶರ್ ನಲ್ಲಿ ಸ್ಫೋಟವಾಗಿದೆ. ಕೆಲಸ ಮಾಡುತ್ತಿದ್ದ 6 ಕಾರ್ಮಿಕರು ಮೃತರಾಗಿದ್ದಾರೆ. ಮೃತದೇಹಗಳು ಛಿದ್ರ ಛಿದ್ರವಾಗಿವೆ. ಲಾರಿಯೊಂದು ಸಂಪೂರ್ಣ ನುಜ್ಜುಗುಜ್ಜಾಗಿ ಬಿದ್ದಿದೆ. ಲಾರಿಯಲ್ಲೇ ಡೈನಮೈಟ್ ಒಯ್ದಿರುವ ಶಂಕೆ ಇದೆ.

ಎಲ್ಲೆಡೆ ವಿದ್ಯುತ್ ಕಡಿತ ಮಾಡಲಾಗಿದೆ.

Home add -Advt

ಜಿಲ್ಲಾಧಿಕಾರಿ, ಎಸ್ಪಿ ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಯುತ್ತಿದೆ.

ಕಿಲೋಮೀಟರ್ ದೂರದವರೆಗೆ ಮೃತದೇಹಗಳು ಛಿದ್ರ ಛಿದ್ರವಾಗಿ ಬಿದ್ದಿವೆ

ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ ಸೇರಿ ಹಲವೆಡೆ ಭೂಕಂಪನ

Related Articles

Back to top button