ಗಮನಿಸಿ, ಸೋಮವಾರ ಶಾಲೆಗಳ ಸಮಯದಲ್ಲಿ ಬದಲಾವಣೆ; ಎಲ್ಲಿಂದ ಆರಂಭವಾಗಲಿದೆ ಪ್ರಧಾನಿ ಮೋದಿ ರೋಡ್ ಶೋ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಬೆಳಗಾವಿ ನಗರದ ಶಾಲೆಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಸೋಮವಾರ ಬೆಳಗ್ಗೆ 7.45ರಿಂದ 11.45ರ ವರೆಗೆ (ಶನಿವಾರದ ಸಮಯದಂತೆ) ಶಾಲೆಗಳನ್ನು ನಡೆಸಲು ಸೂಚನೆ ನೀಡಲಾಗಿದೆ.
ಆದರೆ 10ನೇ ತರಗತಿಯ ಪೂರ್ವಸಿದ್ಧತಾ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಈ ಪರೀಕ್ಷೆಗಳು ರಾಜ್ಯಮಟ್ಟದ್ದಾಗಿರುವುದರಿಂದ ಅವುಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ರೋಡ್ ಶೋ:
ಸೋಮವಾರ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗದಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬರಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಎಪಿಎಂಸಿ ಮೈದಾನದಲ್ಲಿ ಸಿದ್ದಪಡಿಸಲಾಗಿರುವ ಹೆಲಿಪ್ಯಾಡ್ ಗೆ ಮಧ್ಯಾಹ್ನ 2.30ಕ್ಕೆ ಆಗಮಿಸಲಿದ್ದಾರೆ.
ಪ್ರಧಾನ ಮಂತ್ರಿಗಳ ರೋಡ್ ಶೋ ನಡೆಸಲು ತೀರ್ಮಾನಿಸಲಾಗಿದ್ದು, ಎಷ್ಟು ದೂರ ನಡೆಸಬೇಕೆನ್ನುವ ಕುರಿತು ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಎಪಿಎಂಸಿ ಮೈದಾನದಿಂದ ಕಾರ್ಯಕ್ರಮ ನಡೆಯುವ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯವರೆಗೆ 10 ಕಿಮೀ ನಡೆಸಬೇಕೋ ಅಥವಾ ಸ್ವಲ್ಪ ದೂರ ಕಾರಿನಲ್ಲಿ ಬಂದು ನಂತರ ಸ್ವಲ್ಪ ದೂರ ರೋಡ್ ಶೋ ನಡೆಸಬೇಕೋ ಎನ್ನುವ ಚರ್ಚೆ ಇನ್ನೂ ನಡೆಯುತ್ತಿದೆ. ಅದು ಮಾರ್ಗಮಧ್ಯೆ ನಿಲ್ಲುವ ಜನರ ಸಂಖ್ಯೆ ಮತ್ತು ಪ್ರಧಾನಿಗಳ ಮೂಡ್ ಮೇಲೂ ಅವಲಂಭಿಸಿರಲಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ.
ಪ್ರಧಾನಿ ಕಾರ್ಯಕ್ರಮಕ್ಕೆ ಇವುಗಳನ್ನು ತರುವಂತಿಲ್ಲ
https://pragati.taskdun.com/hand-bags-water-bottles-and-electronic-items-cannot-be-brought-to-the-prime-ministers-program/
ಬೆಳಗಾವಿ-ಧಾರವಾಡ ರೈಲುಮಾರ್ಗ, 5 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಮೋದಿ ಶಂಕುಸ್ಥಾಪನೆ
https://pragati.taskdun.com/modi-lays-foundation-stone-for-belagavi-dharwad-railway-5-multi-village-drinking-water-projects/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ