ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮನುಷ್ಯನ ಸಾಧನಾ ಶಕ್ತಿಗೆ ಅವಕಾಶ ಕೊಡುವ ಕೆಲಸ ಮಾಡಿದಾಗ ಮಾತ್ರ ಪರಿಪೂರ್ಣತೆಯಿಂದ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಲು ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದಿ ಪ್ರಾಬ್ಲಂ ಆಪ್ ರುಪಿ ನೂರನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಾವು ಪ್ರತಿ ದಿನ ಸ್ಮರಿಸುತ್ತೇವೆ. ಅಂಬೇಡ್ಕರ್ ಅವರು ಸ್ವಾತಂತ್ರ್ಯ ಹೋರಾಟಕ್ಕೆ ದಿಕ್ಕು ನೀಡಿದ್ದರು. ಅವರು ಇಲ್ಲದಿದ್ದರೆ ಈ ದೇಶದ ಸ್ಥಿತಿ ಏನಾಗುತ್ತಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ಹೋರಾಟದಲ್ಲಿಯೂ ರಾಜಕಾರಣ ಇರುತ್ತದೆ. ಹೋರಾಟದಲ್ಲಿರುವ ಜನರಿಗೆ ಅದರ ಅರಿವಿಲ್ಲದೇ ಹೋರಾಟ ಮಾಡುತ್ತಾರೆ. ಜನರಿಗೆ ಹೋರಾಟದ ಮಾಹಿತಿ ನೀಡಿದವರು ಅಂಬೇಡ್ಕರ್ ಅವರು. ಅಂಬೇಡ್ಕರ್ ಅವರಿಗೆ ದೇಶದ ಇತಿಹಾಸ ಗೊತ್ತಿತ್ತು. ಅವರು ಸ್ವಾತಂತ್ರ್ಯ ಪುರ್ವದಲ್ಲಿಯೇ ದೇಶದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಯೋಚಿಸಿದ್ದರು ಎಂದರು.
ಸಾಮಾಜಿಕ ಮತ್ತು ಆರ್ಥಿಕ ತಜ್ಞರು
ಈ ದೇಶದ ಅಖಂಡತೆ, ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಅವರು ಎಲ್ಲರಿಗೂ ಬೇಕಾದ ಸಾಮಾಜಿಕ ಸೂತ್ರ ಹೆಣೆದರು. ಪ್ರಜಾಪ್ರಭುತ್ವ ಎಲ್ಲರಿಗೂ ಇರಬೇಕು ಎಂದು ಸಂವಿಧಾನ ರಚಿಸಿದರು. ಕೇವಲ ಸಂವಿಧಾನದಲ್ಲಿ ಇದ್ದರೆ ಸಾಲದು ಎಂದು ಸಾಮಾಜಿಕವಾಗಿ ಅದರ ಅವಶ್ಯಕತೆ ಇದೆ ಅನ್ನುವುದು ಮುಖ್ಯ. ಆರ್ಥಿಕ ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಎರಡನ್ನೂ ಒಂದೇ ಎಂದು ನೂರು ವರ್ಷದ ಹಿಂದೆಯೇ ಹೇಳುವ ದೂರದೃಷ್ಟಿ ಹೊಂದಿದ್ದರು. ಹಣಕಾಸು ಬೇರೆ ಆರ್ಥಿಕತೆ ಬೇರೆ, ಸಮಾಜ ಬಿಟ್ಟು ಆರ್ಥಿಕತೆ ಇಲ್ಲ. ಆರ್ಥಿಕ ಅಭಿವೃದ್ಧಿ ಆಗುವುದು ಸಮಾಜದಿಂದ, ಅಂಬೇಡ್ಕರ್ ಅವರು ಮಹಾನ್ ಸಾಮಾಜಿಕ ಮತ್ತು ಆರ್ಥಿಕ ತಜ್ಞರು ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕಿತ್ತು. ಅವರಿಗೆ ಅದು ದೊರೆಯದೆ ಹೋಗಿದ್ದು ವಿಷಾದದ ಸಂಗತಿ ಎಂದರು.
ಸಾಮರ್ಥ್ಯಕ್ಕೆ ಅವಕಾಶ
ಹಸಿವು ನೀಗಿಸುವ ಕೆಲಸ ಮಾಡುವುಷ್ಟೇ ಅಲ್ಲ, ನಾವು ಅವರ ಸಾಮರ್ಥ್ಯಕ್ಕೆ ಅವಕಾಶ ಕೊಡುವ ಕೆಲಸ ಮಾಡಬೇಕು. ಬುದ್ದಿವಂತಿಕೆ ಯಾವುದೇ ಒಬ್ಬರ ಸ್ವತ್ತಲ್ಲ. ಅದು ದೇವರು ಕೊಟ್ಟ ಕೊಡುಗೆ. ಅಂಬೇಡ್ಕರ್ ಅವರು ಹೇಳುತ್ತಾರೆ ಎಕನಾಮಿಕ್ಸ್ ನಲ್ಲಿ ಚಮತ್ಕಾರ ಇಲ್ಲ ಅಲ್ಲಿ ಪರಿಶ್ರಮ ಪಟ್ಟಾಗ ಮಾತ್ರ ಬೆಲೆ ಸಿಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಆರ್ಥಿಕ ಪರಿಸ್ಥಿತಿ ಹಾಳಾಗಿದೆ. ನಮ್ಮ ಆರ್ಥಿಕ ಪರಿಸ್ಥಿತಿಯ ಹೊಣೆ ಹೊತ್ತಿರುವ ರಿಸರ್ವ್ ಬ್ಯಾಂಕ್ ಗೆ ಮೂಲ ಕಾರಣ ಅಂಬೇಡ್ಕರ್ ಎಂದರು.
ಆರ್ಥಿಕ ಸ್ಥಿರತೆ
ಕೋವಿಡ್ ನಂತರ ಎಲ್ಲ ದೇಶಗಳಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ನಮ್ಮ ದೇಶದ ಆರ್ಥಿಕ ಸ್ಥಿರತೆ ಇದೆ. ನಮ್ಮ ಪ್ರಧಾನಿಗಳ ನೇತೃತ್ವದಲ್ಲಿ ನಾವು ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಕರ್ನಾಟಕದಲ್ಲಿ ತುಳಿತಕ್ಕೊಳಗಾದ ಸಮುದಾಯಗಳಿಗೆ ಹೊಸ ಭರವಸೆಯ ಬದುಕು ದೊರೆಯಬೇಕು ಎಂದರು.
*ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೈ ಮುಗಿದು ಮಾಡಿದ ಮನವಿಯೇನು?*
https://pragati.taskdun.com/b-s-yedyurapparequestveerashaiva-lingayitashivamogga/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ