Life Style

*ನೃತ್ಯ ಸಂಭ್ರಮ: ವಿಭಿನ್ನ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಫೆಬ್ರವರಿ 19, ಬುಧವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮಲ್ಲತ್ತಹಳ್ಳಿ ಕಲಾಗ್ರಾಮದ ಸಮುಚ್ಛಯ ರಂಗಮಂದಿರದಲ್ಲಿ “ನೃತ್ಯ ಸಂಭ್ರಮ” ಎಂಬ ಶೀರ್ಷಿಕೆಯಲ್ಲಿ ವಿಭಿನ್ನ ಸಂಗೀತ ಮತ್ತು ನೃತ್ಯ ಕಾರ್ಯಕ್ರಮವನ್ನು ಟ್ರಸ್ಟಿನ ಸಂಸ್ಥಾಪಕ ನಿರ್ದೇಶಕರೂ ಹಾಗೂ ಗುರುಗಳೂ ಆದ ‘ಕಲಾಭೂಷಿಣಿ’ ಡಾ|| ದರ್ಶಿನಿ ಮಂಜುನಾಥ್ ಆಯೋಜಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಗುರು.ವಿದುಷಿ ಲತಾ ಕೆ. ಶಂಕರ್ (ಸಂಸ್ಥಾಪಕ ನಿರ್ದೇಶಕರು, ಕಲಾಮಯಿ ನೃತ್ಯ ಶಾಲೆ), ಎಂ.ವಿ. ಅರುಂಧತಿ (ಹಿರಿಯ ಸಹಾಯಕ ನಿರ್ದೇಶಕರು, ನಗರ ಯೋಜನೆ, ಕರ್ನಾಟಕ ಸರ್ಕಾರ) ಮತ್ತು ಎಂ.ವಿ. ರಂಗಸ್ವಾಮಿ (ಮಾಜಿ ಜಿಲ್ಲಾ ಉಸ್ತುವಾರಿ ಸದಸ್ಯರು, ಹಾಸನ) ಆಗಮಿಸಲಿದ್ದಾರೆ.

Home add -Advt

Related Articles

Back to top button