Latest

ದೇಹದ ತೂಕ ಇಳಿಕೆಗೆ ಈ ಹಣ್ಣು ಲಾಭದಾಯಕ ಹೇಗೆ ಗೊತ್ತೆ ?

ಪ್ರಗತಿ ವಾಹಿನಿ ಹೆಲ್ತ್ ಟಿಪ್ಸ್

ದೇಹದಲ್ಲಿ ಹೆಚ್ಚಿನ ಬೊಜ್ಜಿರುವವರಿಗೆ ತೂಕ ಇಳಿಸಿಕೊಳ್ಳಲು ಬಯಕೆ ಇರುವುದು ಸಾಮಾನ್ಯ. ಇಂಥವರಿಗೆ ನಾನಾ ರೀತಿಯ ವ್ಯಾಯಾಮ, ವಾಕಿಂಗ್‌ಗಳ ಸಲಹೆ ನೀಡಲಾಗುತ್ತದೆ. ಬಹುತೇಕವಾಗಿ ಇವು ಪರಿಣಾಮಕಾರಿಯೂ ಹೌದು. ಆದರೆ ಕೆಲವರಿಗೆ ವ್ಯಾಯಾಮಗಳಿಂದಲೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಅಂಥವರು, ವ್ಯಾಯಾಮಗಳ ಜತೆಗೇ ಈ ಹಣ್ಣನ್ನು ಸೇವಿಸಿದರೆ ತೂಕ ಇಳಿಕೆ ಗ್ಯಾರಂಟಿ ಎನ್ನುತ್ತಾರೆ ಆರೋಗ್ಯ ತಜ್ಞರು. ಅದುವೇ ಪಪ್ಪಾಯಿ.

ಹೌದು, ನಿಯಮಿತವಾಗಿ, ಸಮತೋಲಿತವಾಗಿ ಪಪ್ಪಾಯಿ ಸೇವಿಸಿದರೆ ದೇಹದ ತೂಕ ಪರಿಣಾಮಕಾರಿಯಾಗಿ ಕಡಿಮೆಯಾಗಲು ಸಹಕಾರಿ. ಪಪ್ಪಾಯಿ ಸುಲಭವಾಗಿ ಸಿಗುವ ಹಣ್ಣು. ಅಲ್ಲದೇ ಉತ್ತಮ ಪೋಷಕಾಂಶಗಳು, ವಿಟಮಿನ್‌ಗಳು ಇರುವ ಹಣ್ಣಾಗಿದೆ.

ಪಪ್ಪಾಯಿ ಹಣ್ಣಲ್ಲಿ ಫೈಬರ್ ಅಂಶ ಹೇರಳವಾಗಿದೆ. ಅಲ್ಲದೇ ಉತ್ಕರ್ಷಣ ನಿರೋಧಕ ಅಂಶ ಸಾಕಷ್ಟಿದೆ. ಇದು ಪಪೈನ್ ಕಿಣ್ವಗಳನ್ನು ಹೊಂದಿದ್ದು, ಪಪೈನ್ ಕಿಣ್ವಗಳು ದೇಹದ ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹಾಗಾಗಿ ಪಪ್ಪಾಯಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎನ್ನುವುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

ಬೆಳಗಿನ ಉಪಾಹಾರದ ಜತೆಗೆ ಪಪ್ಪಾಯಿ ಹಣ್ಣನ್ನು ಸೇವಿಸಬಹುದು. ಅಲ್ಲದೇ ಪಪ್ಪಾಯಿಯಿಂದ ಮಾಡಿದ ತಿನಿಸುಗಳನ್ನು ಸಹ ಸೇವಿಸಬಹುದು. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಪಪ್ಪಾಯಿ ಒದಗಿಸುತ್ತದೆ. ಹಾಗಾಗಿ ಇದನ್ನು ಓಟ್ ಮೀಲ್ ಜೊತೆಗೆ ಕೂಡ ಸೇವಿಸಬಹುದು, ಈ ರೀತಿ ಸೇವಿಸಿದರೆ ತೂಕವನ್ನು ಸುಲಭವಾಗಿ ಕಡಿಮೆ ಮಾಡುವುದಲ್ಲದೆ ದೇಹಕ್ಕೆ ಒಳ್ಳೆಯ ಲಾಭವನ್ನು ನೀಡುತ್ತದೆ.

ಮಧ್ಯಾಹ್ನದ ಊಟದ ಜತೆ ಸೇವಿಸುವ ಸಲಾಡ್‌ನ ಭಾಗವಾಗಿ ಪಪ್ಪಾಯಿಯನ್ನು ಸೇವಿಸಬಹುದಾಗಿದೆ. ಸವತೆ ಕಾಯಿ, ಕ್ಯಾರೇಟ್, ಈರುಳ್ಳಿ ಮೊದಲಾದವುಗಳ ಸಲಾಡ್ ಜತೆ ಪಪ್ಪಾಯಿಯ ಸ್ಲೈಸ್‌ಗಳನ್ನೂ ಸೇವಿಸಬಹುದು.

ಇನ್ನು ಸಂಜೆಯ ವೇಳೆಗೆ ಸಹ ಪಪ್ಪಾಯಿ ಹಣ್ಣು ಅಥವಾ ಪಪ್ಪಾಯಿಯಿಂದ ಮಾಡಿದ ತಿನಿಸುಗಳನ್ನು ಸೇವಿಸಬಹುದು. ಪಪ್ಪಾಯಿಯನ್ನು ಸಂಜೆ ಸೇವಿಸುವುದರಿಂದ ಹಸಿವು ನಿಯಂತ್ರಣದಲ್ಲಿರುತ್ತದೆ. ದೇಹದ ಆಯಾಸ ಕಡಿಮೆಯಾಗಿ ದೇಹವನ್ನು ಹೆಚ್ಚು ಚಟುವಟಿಕೆಯಿಂದಿಡಲು ಅನುಕೂಲವಾಗುತ್ತದೆ.

ರಾತ್ರಿಯ ಊಟದ ನಂತರ ಪಪ್ಪಾಯಿಯನ್ನು ಸೇವಿಸುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸುಲಭವಾಗಿ ನಿಯಂತ್ರಿಸಬಹುದು.

ಪಪ್ಪಾಯಿಯಲ್ಲಿ ವಿಟಾಮಿನ್ ಎ ಸಮೃದ್ಧವಾಗಿದೆ. ಅಲ್ಲದೇ ಪೋಲೆಟ್, ಫೈಬರ್ (ನಾರಿನ ಅಂಶ), ಕಾಪರ್, ಮ್ಯಾಗ್ನಿಶಿಯಂ ಮೊದಲಾದ ಖನಿಜಾಂಶಗಳು ಹೇರಳವಾಗಿದೆ. ಹಾಗಾಗಿ ನಿಯಮಿತವಾಗಿ ಪಪ್ಪಾಯಿ ಸೇವನೆಯು ತೂಕ ಇಳಿಕೆಯ ಜತೆಗೆ ಉತ್ತಮ ಆರೋಗ್ಯಕ್ಕೂ ಸಹಕಾರಿಯಾಗುತ್ತದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ.

ಚಂದ್ರಗ್ರಹಣ ಹಿನ್ನೆಲೆ; ಯಾವ ದೇವಾಲಯಗಳು ಬಂದ್? ಯಾವ ದೆವಾಲಯಗಳು ಓಪನ್?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button