Kannada NewsKarnataka News

ಓಡಿಶಾ ಟ್ರಕ್ ಚಾಲಕನಿಗೆ ದೇಶದಲ್ಲೇ ದಾಖಲೆ ದಂಡ

ಕಿತ್ತೂರಲ್ಲಿ ಕುಡಿದು ಚಾಲನೆ ಮಾಡಿದವನಿಗೆ 11 ಸಾವಿರ ರೂ. ದಂಡ –

ಓಡಿಶಾ ಟ್ರಕ್ ಚಾಲಕನಿಗೆ ದೇಶದಲ್ಲೇ ದಾಖಲೆ ದಂಡ

ಪ್ರಗತಿವಾಹಿನಿ ಸುದ್ದಿ, ಭುವನೇಶ್ವರ/ ಬೆಳಗಾವಿ –

ರಾಷ್ಟ್ರದಲ್ಲಿ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದ ನಂತರ ದಂಡದ ಮೊತ್ತ ವಿಪರೀತ ಹೆಚ್ಚಾಗಿದೆ. ದಂಡದ ಮೊತ್ತ ಮೊದಲಿಗೆ ಹೋಲಿಸಿದರೆ ಹತ್ತಾರು ಪಟ್ಟುಹೆಚ್ಚಾಗಿದೆ. ಅನೇಕ ಕಡೆ ಹಾಕಿರುವ ದಂಡದ ಮೊತ್ತ ಎಷ್ಟಿದೆ ಎಂದರೆ ಅವರ ವಾಹನವನ್ನೇ ಮಾರಾಟ ಮಾರಿದರೂ ದಂಡದ ಹಣ ಹುಟ್ಟುವುದಿಲ್ಲ.

ಬೆಂಗಳೂರಿನಲ್ಲಿ ಓರ್ವ ವ್ಯಕ್ತಿಗೆ 17 ಸಾವಿರ ರೂ. ದಂಡ ವಿಧಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಒಂದೇ ದಿನ ಬೆಂಗಳೂರು ಪೊಲೀಸರು ವಸೂಲಿ ಮಾಡಿದ ದಂಡದ ಮೊತ್ತ 30 ಲಕ್ಷ ರೂ. ದಾಟಿತ್ತು.

ಕಿತ್ತೂರಿನಲ್ಲಿ ನಿನ್ನೆ ಕುಡಿದು ಚಾಲನೆ ಮಾಡಿದ ವಿ.ಎ.ಕಮ್ಮಾರ ಎನ್ನುವ ವ್ಯಕ್ತಿಗೆ ಜೆಎಂಎಫ್ ಸಿ ನ್ಯಾಯಾಲಯ 11 ಸಾವಿರ ದಂಡ ವಿಧಿಸಿದ ಪಾವತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

86,500 ರೂ. ದಂಡ

ಇದಲ್ಲದಕ್ಕಿಂತ ದೊಡ್ಡ ಪ್ರಮಾಣದಲ್ಲಿ, ದೇಶದಲ್ಲೇ ಹೊಸ ದಾಖಲೆ ಸೃಷ್ಟಿಸಿದ್ದು ಓಡಿಶಾ ದಲ್ಲಿ ಟ್ರಕ್ ಚಾಲಕನಿಗೆ ವಿಧಿಸಿರುವ ದಂಡ. ಅಶೋಕ ಜಾಧವ ಎಂಬಾತನಿಗೆ ಅಲ್ಲಿನ ಪೊಲೀಸರು 86,500 ರೂ. ದಂಡ ವಿಧಿಸಿದ್ದಾರೆ. ಹಾಗಾದರೆ ಆತ ಮಾಡಿದ ಅಪರಾಧಗಳೇನು?

  1. ಅನಧಿಕೃತ ವ್ಯಕ್ತಿಗೆ ತನ್ನ ಟ್ರಕ್ ನ್ನು ಚಾಲನ ಮಾಡಲು ಕೊಟ್ಟಿದ್ದಕ್ಕೆ – 5000 ರೂ.
  2. ಲೈಸನಸ್ ಇಲ್ಲದೆ ಚಾಲನೆ ಮಾಡಿದ್ದಕ್ಕೆ – 5000 ರೂ.
  3. 18 ಟನ್ ಗೂ ಹೆಚ್ಚು ಭಾರವನ್ನು ಹೆರಿಕೊಂಡು ಹೋಗಿದ್ದಕ್ಕೆ -56,000 ರೂ.
  4. ದೊಡ್ಡ ಅಳತೆಯ ಪ್ರೊಜೆಕ್ಷನ್ ಬಳಕೆ -20,000 ರೂ.
  5. ಸಾಮಾನ್ಯ ತಪ್ಪು ಮಾಡಿದ್ದಕ್ಕೆ -500 ರೂ.

ನಾಗಾಲ್ಯಾಂಡ್ ನ ಬಿಎಲ್ಎ ಇನ್ಫಾಸ್ಟ್ರಕ್ಚರ್ ಕಂಪನಿಗೆ ಸೇರಿದ ಟ್ರಕ್ ಅದಾಗಿದ್ದು, ಸುಮಾರು 5 ಗಂಟೆಗಳ ಕಾಲ ಪೊಲೀಸರೊಂದಿಗೆ ಮಾತುಕತೆ ನಡೆಸಿದ ನಂತರ 70 ಸಾವಿರ ರೂ. ಪಾವತಿಸಿದ್ದಾನೆ ಅಶೋಕ ಜಾಧವ.

ಓಡಿಶಾದಲ್ಲಿ ಸೆಪ್ಟಂಬರ್ 1ರಿಂದಲೇ ಕಟ್ಟುನಿಟ್ಟಾಗಿ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈವರೆಗೆ ಅಲ್ಲಿನ ಪೊಲೀಸರು ಒಂದು ಕೋಟಿ ರೂ.ಗಿಂತ ಹೆಚ್ಚು ದಂಡ ಸವೂಲಿ ಮಾಡಿದ್ದಾರೆ. ಆಟೋ ಒಂದಕ್ಕೆ 47,500 ರೂ. ದಂಡ ಹಾಕಿದ್ದಾರೆ.

ಬೆಳಗಾವಿಯಲ್ಲೂ ಹೊಸ ಕಾಯ್ದೆಯಂತೆ ದಂಡ ವಿಧಿಸುವ ಎಚ್ಚರಿಕೆಯನ್ನು ಪೊಲೀಸರು ಭಾನುವಾರ ಪ್ರಕಟಣೆಯ ಮೂಲಕ ನೀಡಿದ್ದಾರೆ. ಸೋಮವಾರದಿಂದ ಕಟ್ಟುನಿಟ್ಟಾಗಿ ದಂಡ ಹಾಕುವ ಪ್ರಕ್ರಿಯೆ ಆರಂಭಿಸುವ ಮುನ್ಸೂಚನೆ ನೀಡಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button