Belagavi NewsBelgaum NewsKannada NewsKarnataka NewsPolitics

*ಮಲಪ್ರಭಾ ನದಿಗೆ ಬಾಗಿನ ಅರ್ಪಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಕೃತಿ ಜೀವಿಗಳು ಬದುಕಲು ಭೂಮಿ, ಉಸಿರಾಟಕ್ಕೆ ಗಾಳಿ, ಕುಡಿಯಲಿಕ್ಕೆ ಜಲ ಬೆಚ್ಚಗಿರಲು ಅಗ್ನಿ, ಬೆಳಕು ಸೇರಿದಂತೆ ಸರ್ವಸ್ವ ನೀಡಿದ ನಿಸರ್ಗಕ್ಕೆ ಮಾನವರಾದ ನಾವು ಕೃತಜ್ಞತೆ ಸಲ್ಲಿಸಬೇಕು. ಪಕೃತಿಯನ್ನು ಹಾಳು ಮಾಡಿದರೆ ದುರಂತ ತಪ್ಪಿದ್ದಲ್ಲ ಎಂದು ಜಾಲಿಕೊಪ್ಪ ತಪೋಭೂಮಿಯ ಪೂಜ್ಯ ಶಿವಾನಂದ ಗೂರೂಜಿ ಹೇಳಿದರು.

ಸಮೀಪದ ಜಾಲಿಕೊಪ್ಪ ಗ್ರಾಮದ ಮಲಪ್ರಭಾ ನದಿ ದಡದಲ್ಲಿ ಬಾಗಿನ ಅರ್ಪಿಸಿದ ನಂತರ ತಪೊಭೂಮಿ ಆಶ್ರಮದಲ್ಲಿ ನಡೆದ ಸಭೆಯ ಸಾನಿಧ್ಯವಹಿಸಿ ಮಾತನಾಡಿದ ಅವರು, ಮನುಷ್ಯನ ಜೀವನಕ್ಕೆ ಬೇಕಾದ ಅನ್ನ, ನೀರು, ಗಾಳಿ, ವಸತಿ  ಎಲ್ಲವನ್ನು ನಿಸರ್ಗದಿಂದ ಅನುಭವಿಸಿ ಮಾನವ ತನ್ನ ದುರಾಸೆಗೆ ಅನ್ನ ನೀಡುವ ಭೂಮಿಗೆ ವಿಷ ಹಾಕಿ ತನ್ನ ಆರೋಗ್ಯವನ್ನು ತಾನೆ ಹಾಳು ಮಾಡಿಕೊಳ್ಳುತಿದ್ದಾನೆ. ಕುಡಿಯವ ನೀರು, ಕೃಷಿ ಭೂಮಿಯ ನೀರಾವರಿಗಾಗಿ ತಾಯಿ ಮಲಪ್ರಭೆಯನ್ನ ಕೋಟ್ಯಾಂತರ ಜನ ಅವಲಂಬಿಸಿದ್ದಾರೆ. ಅವರೆಲ್ಲರೂ ಮಲಪ್ರಭಾ ನದಿ ಮೈದುಂಬಿಕೊಂಡಾಗಲು ಜನ ಮೈಮೆರೆಯುವದು ದುರದೃಷ್ಟಕರ. ಪ್ರಕೃತಿಗೆ ಸದಾ ಕೃತಜ್ಞತಾ ಭಾವದಿಂದ ಇರಬೇಕೆಂದರು.

ಮಾಜಿ ಶಾಸಕ ಡಾ. ವಿ.ಆಯ್.ಪಾಟೀಲ ಮಾತನಾಡಿ, ರೈತರ ಕಷ್ಟಗಳನ್ನು ಅರಿತುಕೊಳ್ಳುವ  ಜನಪ್ರತಿನಿಧಿಗಳಿಗೆ ಮಾತ್ರ ರೈತರ ಸಂಕಷ್ಟ ಅರ್ಥವಾಗುತ್ತದೆ. ನನ್ನ ಅಧಿಕಾರವಧಿಯ ಮುಂಚೆ ಮಲಪ್ರಭಾ ನದಿ ದಡದ ಪಂಪ ಸೆಟ್ ಬಳಕೆದಾರರ ಕರೆಂಟ್ ಕಟ್ ಮಾಡುತಿದ್ದ ಅಧಿಕಾರಿಗಳ ಕ್ರಮಕ್ಕೆ ಬ್ರೇಕ್ ಹಾಕಲಾಯಿತು.‌ ಮುರಗೋಡ ಚಚಡಿ ಏತ ನೀರಾವರಿಗೆ ಹಣ ಬಿಡುಗಡೆ ಮಾಡಲಾಗಿತ್ತು ಆದರು ಇಂದು ರಯತರಿಗೆ ಹನಿ‌ ನೀರು ಬರದೆ ಇರುವದು ದುರ್ಧೈವ. ವಿಪರ್ಯಾಸವೆಂದರೆ ರಾಜ್ಯದಲ್ಲಿ‌ಆಡಳಿತ ಪಕ್ಷದ ಶಾಸಕರಿದ್ದರು ನೀರಾವರಿ ಯೊಜನೆಗೆ ಬಿಡಿಗಾಸು ಬಂದಿಲ್ಲ ಮೊದಲು ನೀರಾವರಿ ಯೋಜನೆಗೆ ಆಧ್ಯತೆ ನೀಡಬೇಕೆಂದರು.

ಬರುವ ದಿನಗಳಲ್ಲಿ ಸರ್ಕಾರ ಎಚ್ಚೆತ್ತುಕೊಂಡು ಮಲಪ್ರಭಾ ನದಿ ದಡದಲ್ಲಿರುವ ಹಳ್ಳಿಗಳ ಜಮೀನುಗಳಿಗೆ ನೀರಾವರಿ ಯೋಜನೆ ಅನುಷ್ಠಾನಗೊಳಿಸಬೇಕು. ಅಚುಕಟ್ಟು ಪ್ರದೇಶದಲ್ಲಿರುವ ಏತ ನೀರಾವರಿ ಪಂಪಸೆಟ್ ಗಳು ಸಂಪೂರ್ಣ ಹಾಳಾಗಿದ್ದು ಅವುಗಳ ದುರಸ್ತಿ ಕಾರ್ಯಕ್ಕೆ ಅನಮೊದನೆ ನಮ್ಮ ಅಧಿಕಾರದಲ್ಲಿ ಪಡೆದಿದ್ದರು ಇಂದಿಗೂ ದುರಸ್ತಿ ನಡೆಸದೆ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯಕ್ಕೆ ಕಲ್ಲು ಹಾಕಿದ್ದಾರೆ ಎಂದರು. 

Home add -Advt

ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, 1974ರಲ್ಲಿ ನಿರ್ಮಾಣವಾದ ರೇಣುಕಾ ಸಾಗರ ಜಲಾಶೆ 11ನೇ ಬಾರಿ ತುಂಬಿದೆ. ಈ ವರ್ಷ ಜಲಾಶಯ ತುಂಬಿರುವದರಿಂದ ನದಿ ಪಾತ್ರದ ಹಾಗೂ ಹುಬ್ಬಳ್ಳಿ-ಧಾರವಾಡ, ಗದಗ ಹಾಗೂ ಬಾಗಲಕೋಟ ಜಿಲ್ಲೆಯ ಜನತೆಗೆ ಕುಡಿಯುವ ನೀರಿಗೆ ಚಿಂತೆ ಇಲ್ಲದಂತಾಗಿದೆ. ನೂರಾರು ರೈತರು ಕುಟುಂಬ ಸಮೇತ ಆಗಮಿಸಿ ಮಲಪ್ರಭೆಗೆ ಬಾಗಿನ ಅರ್ಪಿಸಿದ್ದು ರೈತರ ಕರ್ತವ್ಯವನ್ನು ಎಚ್ಚರಿಸಿದೆ. ಪೂಜ್ಯರ ನೇತೃತ್ವದಲ್ಲಿ  ಮಲಪ್ರಭಾ ಸ್ವಚ್ಚತಾ ಕಾರ್ಯಕ್ರಮ, ಮಲಪ್ರಭಾ ಆರತಿ ಕಾರ್ಯಕ್ರಮ ಬಾಗಿನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವದು ಶ್ಲಾಘನೀಯ ಎಂದರು.

ನಿವೃತ್ತ ಪ್ರಾಂಶುಪಾಲ ಡಾ. ಗಿರೀಶ್ ಗಣಾಚಾರಿ ಮಾತನಾಡಿ, ಶರಣರು ಮೆಟ್ಟಿದ ಭೂಮಿಯಲ್ಲಿ ಶರಣರ ವಚನಗಳನ್ನು ಕೇಳಿ ಅವುಗಳ ತತ್ವದಡಿ ನಡೆದರೆ ಜೀವನ ಪಾವನವಾಗುವದು ಎಂದರು.

ವೇದಿಕೆಯ ಮೇಲೆ ಮಲ್ಲಪ್ಪ ಮುರಗೋಡ, ಡಾ.ಸಿ.ಬಿ.ಗಣಾಚಾರಿ, ಗ್ರಾ ಯಲ್ಲಪ್ಪ ಹುಲಗಣ್ಣವರ, ಜಾಲಿಕೊಪ್ಪ ತಪೋಭೂಮಿ ಆಶ್ರಮದಿಂದ ಭಜನೆ, ಆರತಿ ಎತ್ತಿದ ರೈತ ಮಹಿಳೆಯರು ರೈತ ಸಂಘಟನೆಯ ನೂರಾರು ನಾಯಕರು ವಿಜೃಂಭಣೆಯಿಂದ ನಡೆದುಕೊಂಡು ಸಾಗಿ ನದಿ ದಡದಲ್ಲಿ ಬಾಗಿನ ಅರ್ಪಣೆಯ ಕಂಕೈರ್ಯಗಳನ್ನು ನೆರವೆರಿಸಿದರು. ರೈತ ಸಂಘಟನೆಕಾರರ ಮಹಾ ಒಕ್ಕೂಟ ಅಧ್ಯಕ್ಷ ಬೀರಪ್ಪ ದೇಶನೂರ, ಬಸನಗೌಡ ಪಾಟೀಲ, ಬಸವರಾಜ ಮೊಕಾಶಿ,  ಘೂಳಪ್ಪ ಹೊಳಿ, ಬಸಲಿಂಗವ್ವ ಕರಡಿಗುದ್ದಿ,  ಮಲ್ಲಸರ್ಜಗೌಡ ಪಾಟೀಲ, ಪರಪ್ಪ ಬೊಳಶೆಟ್ಟಿ, ಮಲ್ಲಿಕಾರ್ಜುನ ಅಂಗಡಿ, ಸಂಜು ಬೋಳೆಶೆಟ್ಟಿ, ಮಂಜುನಾಥ ಬೋಳಶೆಟ್ಟಿ, ರಾಜು ಬೋಳಶೆಟ್ಟಿ,  ಸಿದ್ಧಲಿಂಗ ಬೋಳಶೆಟ್ಟಿ, ಅರ್ಜುನ ಕೊಡ್ಲಿ, ಬಾಬೂರಾವ ಬೋಳಶೆಟ್ಟಿ, ಎಮ್.ಐ ಕಾದ್ರೋಳ್ಳಿ, ಪರಪ್ಪ ಬೊಳಶೆಟ್ಟಿ, ಅಶೋಕ‌ ಪೆಟೆಂದ, ಮಹೇಶ ಅಬ್ಬಾಯಿ, ಮಡ್ಡೆಪ್ಪ ಮುಲಿಮನಿ, ರವಿ ಮುರಗೋಡ, ಬಾಬು ಅಂಗಡಿ, ರಾಜು ಬೋಳಶೆಟ್ಟಿ, ಮಲ್ಲಪ್ಪ ಹುಬ್ಬಳ್ಲಿ, ಬಸವಾಣೆಪ್ಪ ಹೊಳಿ, ಮಂಜುನಾಥ ಬೊಳಶೆಟ್ಟಿ, ಈರಣ್ಣ ಬೋಳಶೆಟ್ಟಿ‌ ಸೇರಿದಂತೆ‌ ನೂರಾರು ಜನರು ಪಾಲ್ಗೊಂಡಿದ್ದರು.

ಶರಣರ ವೇಶದಾರಿ ಮಕ್ಕಳ ಮೆರುವಣಿಗೆ

ಅಕ್ಕಮಹಾದೇವಿ, ಬಸವಣ್ಣನವರ, ಚನ್ನಬಸವಣ್ಣನವರು, ಮಡಿವಾಳ ಮಾಚಿದೇವ, ಅಜಗಣ್ಣ, ನಾಗಲಾಂಬಿಕೆ, ಗಂಗಾಂಭಿಕೆ ವೇಷ ತೊಟ್ಟ ಮಕ್ಕಳನ್ನು ಟ್ಯಾಕ್ಟರ್ ದಲ್ಲಿ ಜಾಲಿಕೊಪ್ಪ ಗ್ರಾಮದ ಬಿದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

Related Articles

Back to top button