
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚೀನಾದಲ್ಲಿ ಅಟ್ಟಹಾಸ ಮೆರೆಯುತ್ತಿರುವ ಒಮಿಕ್ರಾನ್ ರೂಪಾತಂತರಿ ವೈರಸ್ XBB.1.5 ಈಗ ಕರ್ನಾಟಕದಲ್ಲಿ ಮೊದಲಬಾರಿಗೆ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.
XBB.1.5 ವೈರಸ್ ದೇಶದಲ್ಲಿ ಮೊದಲಬಾರಿ ಗುಜರಾತ್ ನಲ್ಲಿ ಪತ್ತೆಯಾಗಿತ್ತು. ಈಗಾಗಲೇ ಈ ವೈರಸ್ ಚೀನಾ, ಜಪಾನ್ ಸೇರಿದಂತೆ ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ಕರ್ನಾಟಕದಲ್ಲಿಯೂ ಕಂಡು ಬಂದಿದೆ. ಕೊವೀಡ್ ಒಮಿಕ್ರಾನ್ ರೂಪಾಂತರಿ ವೈರಸ್ BF.7 ಆತಂಕದಲ್ಲಿರುವಾಗಲೇ ರಾಜ್ಯದಲ್ಲಿ XBB.1.5 ಕಾಟ ಆರಂಭವಾದಂತಿದೆ.
ಒಮಿಕ್ರಾನ್ ಉಪತಳಿಯಾಗಿರುವ XBB.1.5, BF.7 ವೈರಸ್ ಗಿಂತ ಅತಿವೇಗವಾಗಿ ಹರಡುತ್ತದೆ. ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಗುಜರಾತ್ ನಲ್ಲಿ ಮೂವರಲ್ಲಿ ಈ ಸೋಂಕು ದೃಢಪಟ್ಟಿದ್ದರೆ ರಾಜಸ್ಥಾನದಲ್ಲಿ ಓರ್ವರಲ್ಲಿ ಹಾಗೂ ಕರ್ನಾಟಕದಲ್ಲಿ ಓರ್ವರಲ್ಲಿ ಪತ್ತೆಯಾಗಿದೆ.
*ಕೊರಿಯರ್ ಆಫೀಸ್ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣ; ಪ್ರಮುಖ ಆರೋಪಿ ಅರೆಸ್ಟ್*
https://pragati.taskdun.com/dtdc-courier-officemixi-blast-caseaccuesd-arresthasana/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ