Kannada NewsLatest

ಬೆಳಗಾವಿಗೆ 150 ಕೋಟಿ ರೂ. ಅನುದಾನಕ್ಕೆ ಖಾದರ್ ಭರವಸೆ -ಅಭಯ ಪಾಟೀಲ

 

ಪ್ರಗತಿವಾಹಿನಿ, ಬೆಳಗಾವಿ: 

ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಯಾದ  ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಬೆಳಗಾವಿ ನಗರದ  ಕುಡಿಯುವ ನೀರಿನ ವ್ಯವಸ್ಥೆ,  ರಸ್ತೆ,  ಚರಂಡಿ ಮತ್ತು ಒಳಚರಂಡಿ ಸಮಸ್ಯೆ,  ಕಸ ವಿಲೇವಾರಿ ಸಮಸ್ಯೆಗಳ ಕುರಿತು  ಗಮನ ಸೆಳೆದರು. 

Home add -Advt

 ಅಲ್ಲದೇ,   ಬೆಳಗಾವಿ ನಗರದ ಅಭಿವೃದ್ಧಿ ‌ಗೆ 150 ಕೋಟಿ ರೂಪಾಯಿಗಳ ಅನುದಾನ ಮೀಸಲಿಡುವ ಬಗ್ಗೆ  ಕರ್ನಾಟಕ ಸರ್ಕಾರ ಬಜೆಟ್ ನಲ್ಲಿ ಘೋಷಣೆ ಮಾಡಿತ್ತು,  ಆದರೆ ಈ ಅನುದಾನ ಇನ್ನೂವರೆಗೂ ಬಿಡುಗಡೆ ಆಗಿಲ್ಲ,  ಎನ್ನುವ ಸಂಗತಿಯನ್ನು  ಅಭಯ ಪಾಟೀಲ  ಸಚಿವರ ಗಮನಕ್ಕೆ ತಂದರು. 

ಬರುವ ಕ್ಯಾಬಿನೆಟ್ ನಲ್ಲಿ ಬೆಳಗಾವಿ ನಗರದ ಅಭಿವೃದ್ಧಿ ಗೆ 150 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಲಾಗುವುದು  ಎಂದು ಸಚಿವರು ಭರವಸೆ ನೀಡಿದರು ಎಂದು ಅಭಯ ಪಾಟೀಲ ತಿಳಿಸಿದ್ದಾರೆ.

 

Related Articles

Back to top button