*ಆ.25 ರಂದು ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರರ ಪುರಾಣ ಮಂಗಲ ಕಾರ್ಯಕ್ರಮ, ಶ್ರೀ ವೀರಭದ್ರ ದೇವಸ್ಥಾನದ ಕಳಸಾರೋಹಣ ಹಾಗೂ ಧರ್ಮ ಸಮಾರಂಭ*

ಪ್ರಗತಿವಾಹಿನಿ ಸುದ್ದಿ, ಧಾರವಾಡ: ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ. ಷ.ಬ್ರ ಶಿವಸಿದ್ಧರಾಮೇಶ್ವರ ಶಿವಾಚಾರ್ಯರ ಸಂಕಲ್ಪದ ಮೇರೆಗೆ ಸುಳ್ಳ ಗ್ರಾಮದ ಸರ್ವ ಭಕ್ತರ ಆಶಯದಂತೆ ಹುಬ್ಬಳ್ಳಿ ತಾಲೂಕಿನ ಸುಳ್ಯ ಗ್ರಾಮದ ಪಂಚಗೃಹ ಹಿರೇಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಸೋಮಾಪುರ ಹಿರೇಮಠದ ಶ್ರೀ.ವೇ.ಮೂ ಸಿದ್ಧರಾಮಯ್ಯನವರಿಂದ ನಡೆದುಕೊಂಡು ಬಂದ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರರ ಪುರಾಣ ಮಂಗಲ ಕಾರ್ಯಕ್ರಮ, ಶ್ರೀ ವೀರಭದ್ರ ದೇವಸ್ಥಾನದ ಕಳಸಾರೋಹಣ ಹಾಗೂ ಧರ್ಮ ಸಮಾರಂಭವನ್ನು ಆಗಸ್ಟ 25 ರಂದು ಆಯೋಜಿಸಲಾಗಿದೆ.
ಆಗಸ್ಟ 25 ರ ಸಂಜೆ 6 ಗಂಟೆಗೆ ಧರ್ಮ ಸಮಾರಂಭ ನಡೆಯಲಿದೆ. ಸಮಾರಂಭದ ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅವರು ವಹಿಸುವರು. ಅಧ್ಯಕ್ಷತೆಯನ್ನು ಶ್ರೀ ಷ.ಬ್ರ. ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು ವಹಿಸಲಿದ್ದಾರೆ.
ನೇತೃತ್ವವನ್ನು ಷ.ಬ್ರ. ಉಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಸಮ್ಮುಖವನ್ನು ಶ್ರೀ. ಸ ಬ್ರ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು, ಉಪದೇಶಾಮೃತವನ್ನು ಷ.ಬ್ರ. ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಶ್ರೀ. ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ.ಷ.ಬ್ರ. ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ.ಷ.ಬ್ರ.ಅಭಿನವ ಶಾತಲಿಂಗ ಶಿವಾಚಾರ್ಯ ಸ್ವಾಮಿಗಳು ವಹಿಸುವರು.
ಶ್ರೀ.ಷ.ಬ್ರ. ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ. ಷ.ಬ್ರ. ಮರುಳಸಿದ್ದ ಶಿವಾಚಾರ್ಯ ಸ್ವಾಮಿಗಳು, ಶ್ರೀ ಷ. ಬ್ರ. ಮಹೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ದಾನಯ್ಯದೇವರು ಅವರು ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಶಾಸಕರಾದ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ಕಾಂಗ್ರೆಸ್ ಮುಖಂಡರಾದ ವಿನೋದ ಅಸೂಟಿ, ಪ್ರಗತಿಪರ ರೈತರಾದ ವೆ.ಮೂ. ಬಸಯ್ಯನವರು ಕಾಡಯ್ಯನವರು ಹಿರೇಮಠ, ಕೆಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊರಕೇರಿ, ಪಾಲಿಕೆಯ ಮಾಜಿ ಸದಸ್ಯರಾದ ಪಿ.ಕೆ. ರಾಯನಗೌಡ್ರ, ಜಿಲ್ಲಾ ಪಂಚಾಯತಿಯ ಮಾಜಿ ಉಪಾಧ್ಯಕ್ಷರಾದ ಶಿವಾನಂದ ಕರಿಗಾರ, ಗುರು ರಾಯನಗೌಡ್ರ ಭಾಗವಹಿಸಲಿದ್ದಾರೆ.
ಶ್ರೀ ವೀರಭದ್ರೇಶ್ವರ ದೇವಸ್ಥಾನದ ಗೋಪುರದ ಸೇವಾಕರ್ತರಾದ ಗಿರಿಜಮ್ಮ ಹೂಗಾರ, ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯ ಸಿಪಿಐ ಮುರಗೇಶ ಚನ್ನಣ್ಣವರ, ನಿವೃತ್ತ ಎಎಸ್‌ಪಿ ಎಂ.ಬಿ.ಸಂಕದ ಅವರನ್ನು ಸನ್ಮಾನಿಸಲಾಗುವುದು.
ಅಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಕಲ್ಮೇಶ್ವರ ಹಾಗೂ ಶ್ರೀ ಷ.ಬ್ರ. ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಗುಗ್ಗಳೋತ್ಸವವು, ಭಜನೆ, ಡೊಳ್ಳು ಕುಣಿತ, ಆರತಿ, ಕುಂಭಗಳೊಂದಿಗೆ ಅತಿ ವಿಜೃಂಭಣೆಯೊಂದಿಗೆ ಜರುಗಲಿದೆ. ಸಂಜೆ 5 ಗಂಟೆಗೆ ಶ್ರೀ ವೀರಭದ್ರ ಸ್ವಾಮಿಯ ದೇವಸ್ಥಾನದ ಕಳಸಾರೋಹಣವು ಶ್ರೀ ಮದ್ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಅಮೃತ ಹಸ್ತದಿಂದ ನೆರವೇರುವುದು ಎಂದು ಪ್ರಕಟಣೆ ತಿಳಿಸಿದೆ.