Belagavi NewsBelgaum NewsKannada NewsKarnataka News

ಜೂನ್ 8ರಂದು ಡಾ.ಪ್ರಭಾಕರ ಕೋರೆಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಇ ಸಂಸ್ಥೆಯ ಚೇರಮನ್ ಆಗಿ ಸುದೀರ್ಘ 40 ವರ್ಷ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಜೂನ್ 8ರಂದು ಡಾ.ಪ್ರಭಾಕರ ಕೋರೆಯವರಿಗೆ ಸನ್ಮಾನ ನಡೆಯಲಿದೆ.

ಕೆಎಲ್ಇ ಸಂಸ್ಥೆಯ ನಿವೃತ್ತ ಸಿಬ್ಬಂದಿ ಮತ್ತು ಅಭಿಮಾನಿಗಳ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ನಡೆಯಲಿದೆ.

Home add -Advt

ಡಾ.ಪ್ರಭಾಕರ ಕೋರೆ ಕಳೆದ 40 ವರ್ಷಗಳಿಂದ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಅಂಗ ಸಂಸ್ಥೆಗಳನ್ನು ಗಣನೀಯವಾಗಿ ಏರಿಸುವ ಮೂಲಕ ಮತ್ತು ಹಲವು ಮೌಲ್ಯಾಧಾರಿತ ಯೋಜನೆಗಳ ಮೂಲಕ ಸಂಸ್ಥೆಯನ್ನು ವಿಶ್ವಮಟ್ಟಕ್ಕೆ ಏರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈಗಾಗಲೆ ಸಂಸ್ಥಯ ವತಿಯಿಂದ ಸನ್ಮಾನ ನೆರವೇರಿಸಲಾಗಿದೆ. ಇದೀಗ ಸಂಸ್ಥೆಯ ನಿವೃತ್ತ ಸಿಬ್ಬಂದಿ ಸನ್ಮಾನಿಸಲು ಮುಂದಾಗಿದ್ದಾರೆ.

Related Articles

Back to top button