Belagavi NewsBelgaum NewsElection NewsKannada NewsKarnataka NewsPolitics

ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗಾಗಿ ಅಭಿಮಾನಿಗಳಿಂದ ದಂಡ ನಮಸ್ಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗಾಗಿ ಅಭಿಮಾನಿಗಳಿಂದ ದಂಡ ಹಾಕಲಾಯಿತು.

ಜೂನ್ 4 ರಂದು ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು, ಈ ಹಿನ್ನೆಲೆಯಲ್ಲಿ ನಿಪ್ಪಾಣಿ ತಾಲೂಕಿನ ಹುನ್ನರಗಿ ಗ್ರಾಮದ ಬಜರಂಗ ಶಿಂಗೆ ಹಾಗೂ ರಮೇಶ ಮಾಳಿ, ಪ್ರಿಯಾಂಕಾ ಜಾರಕಿಹೊಳಿ ಅತ್ಯಧಿಕ ಮತಗಳಿಂದ ಗೆಲುವನ್ನು ಸಾಧಿಸಲಿ ಎನ್ನುವ ಉದ್ದೇಶದಿಂದ ದಂಡ ನಮಸ್ಕಾರ ಹಾಕಿದರು.

Home add -Advt

ಪ್ರಾರಂಭದಲ್ಲಿ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಅಲ್ಲಿಂದ ಅಕ್ಕೋಳ ಗ್ರಾಮದ ಶ್ರೀ ಸಂತ ಬಾಳುಮಾಮಾ ದೇವಸ್ಥಾನದವರೆಗೆ ದಂಡ ನಮಸ್ಕಾರ ಹಾಕಿ, ಪ್ರಿಯಾಂಕಾ ಜಾರಕಿಹೊಳಿ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಅಭಿಮಾನಿಗಳು ಜೂನ್ 4 ರಂದು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರಿಯಾಂಕಾ ಜಾರಕಿಹೊಳಿ ಅತ್ಯಧಿಕ ಮತಗಳಿಂದ ಗೆಲವು ಸಾಧಿಸಲಿ ಹಾಗೂ  ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಸರ್ಕಾರ ರಚನೆ ಆಗಲಿ ಎನ್ನುವ ಉದ್ದೇಶದಿಂದ  ಸುಮಾರು 6 ಕೀ ಮೀ ವರೆಗೆ ದಂಡ ನಮಸ್ಕಾರ ಹಾಕಿ ದೇವರಲ್ಲಿ ಪ್ರಾರ್ಥಿಸಿಕೊಂಡಿದ್ದೇವೆ ಎಂದರು. 

ಈ ಸಂಧರ್ಭದಲ್ಲಿ ಭಾರತಿ ಬರಗಾಲೆ, ಪ್ರಕಾಶ ಬರಗಾಲೆ, ಬಸವರಾಜ ಬರಗಾಲೆ, ದೀಲಿಪ ವರಾಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

Back to top button