Kannada NewsKarnataka News

ಜನಕಲ್ಯಾಣ ಟ್ರಸ್ಟ್ ಗೆ ಒಂದು ಲಕ್ಷ ರೂ. ದೇಣಿಗೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕರ್ನಾಟಕ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್  ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜನಕಲ್ಯಾಣ ಟ್ರಸ್ಟ್ ಗೆ  ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು.

ಜನಕಲ್ಯಾಣ ಟ್ರಸ್ಟ್  ಬೆಳಗಾವಿ ಕೊರೋನಾ ಸಾಂಕ್ರಾಮಿಕ ಸಂತ್ರಸ್ತರ ಸಲುವಾಗಿ ಕೋವಿಡ್ ಕೇರ್ ಸೆಂಟರ್ ನಡೆಸುತ್ತಿದೆ.

ಈಗಾಗಲೇ ಎರಡು ಕಡೆ ಕೊರೋನಾ ಸಂತ್ರಸ್ತರಿಗೆ ಆಕ್ಸಿಜನ್ ಬೆಡ್, ಔಷಧಿ ಮತ್ತು ಆಹಾರ  ಪೂರೈಸಲಾಗುತ್ತಿದ್ದು, ಬಡ ಮತ್ತು ಸಾಮಾನ್ಯ ಜನರಿಗೆ  ಈ ಕೋವಿಡ ಕೇರ್ ಸೆಂಟರ್ ನಿಂದ  ಚಿಕಿತ್ಸೆ ನೀಡಲಾಗುತ್ತಿದೆ.  ಜನಕಲ್ಯಾಣ ಟ್ರಸ್ಟ್ ನ ಬೆಳಗಾವಿ  ಸಂತ ಮೀರಾ ಶಾಲೆಯ  ಅವರಣದ ಕೋವಿಡ ಕೇರ್ ಸೆಂಟರ್ ಗೆ ಶಂಕರಗೌಡ ಪಾಟೀಲ್ ಭೇಟಿ ನೀಡಿ ಜನಕಲ್ಯಾಣ ಟ್ರಸ್ಟ್ ನ ಸೇವಾ ಕಾರ್ಯಕ್ಕೆ  ಒಂದು ಲಕ್ಷ ರೂಪಾಯಿ ನೀಡಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಜನಕಲ್ಯಾಣ ಟ್ರಸ್ಟ್ ಪ್ರಮುಖರಾದ  ರಾಘವೇಂದ್ರ ಕಾಗವಾಡ,  ಕೃಷ್ಣಾನಂದ ಕಾಮತ್,  ಪರಮೇಶ್ವರ ಹೆಗಡೆ , ಅಶೋಕ್ ಶಿಂತ್ರೆ ಹಾಗೂ ರಾಜ್ಯ ಜವಳಿ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ನೀಲಕಂಠ ಮಾಸ್ತಮರ್ಡಿ. ಮತ್ತು ಸುನೀಲ್ ದೇಶಪಾಂಡೆ ಇತರರು ಹಾಜರಿದ್ದರು.

ವಾರದಲ್ಲಿ ಸರಕಾರಕ್ಕೆ ಟಾಸ್ಕ್ ಫೋರ್ಸ್ ವರದಿ – ಯಡಿಯೂರಪ್ಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button