
ಯಳ್ಳೂರ ಅವಚಾರಹಟ್ಟಿ ಶ್ರೀ ವಿಠ್ಠಲಾಯಿದೇವಿ ಮಂದಿರಕ್ಕೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೆರವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮೀಣ ವಿಧಾನಸಭಾ ಕ್ಷೇತ್ರದ ಯಳ್ಳೂರ ಅವಚಾರಹಟ್ಟಿ ಶ್ರೀ ವಿಠ್ಠಲಾಯಿದೇವಿ ಮಂದಿರದ ಮೇಲ್ಚಾವಣಿಯ ಕಾಂಕ್ರೀಟ್ (ಸ್ಲ್ಯಾಬ್) ಪೂಜೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ನೆರವೇರಿಸಿದರು.
ಇದೇ ವೇಳೆ ಲಕ್ಷ್ಮೀ ತಾಯಿ ಫೌಂಡೇಷನ್ ವತಿಯಿಂದ ಒಂದು ಲಕ್ಷ ರೂ,ಗಳ ದೇಣಿಗೆಯನ್ನು ದೇವಸ್ಥಾನ ಕಮೀಟಿಯವರಿಗೆ ಹಸ್ತಾಂತರಿಸಿದ ಹೆಬ್ಬಾಳಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹುತೇಕ ಎಲ್ಲ ದೇವಸ್ಥಾನಗಳ ಅಭಿವೃದ್ಧಿಯ ಕೆಲಸಗಳು ಪ್ರಗತಿಯ ಹಂತದಲ್ಲಿದ್ದು, ಶೀಘ್ರವಾಗಿ ಪೂರ್ಣಗೊಳ್ಳಲಿವೆ. ಜನರ ಆರೋಗ್ಯ, ನೆಮ್ಮದಿಯ ಬದುಕಿಗೆ ದೈವಾನುಗ್ರಹವಿರಲಿ ಎನ್ನುವ ಕಾರಣಕ್ಕೆ ಎಲ್ಲ ಕಡೆ ಜದೇವಸ್ಥಾನಗಳ ನಿರ್ಮಾಣಕ್ಕೆ ನೆರವು ನೀಡುತ್ತಿದ್ದೇನೆ ಎಂದು ಹೇಳಿದರು.
ಸ್ಲ್ಯಾಬ್ ಪೂಜೆಯ ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಮಹಿಳೆಯರು, ಮೋನಪ್ಪ ಪಾಟೀಲ, ಅರುಣ ಕಟಾಂಬಳೆ, ಕಿರಣ ಪಾಟೀಲ, ಯಲ್ಲಪ್ಪ ಪಾಟೀಲ, ಲಕ್ಷ್ಮಣ, ಸಿದ್ದಪ್ಪ ಚತ್ರೆ, ರಾಜೇಂದ್ರ ಸುತಾರ್, ಮಾರುತಿ, ರಮೇಶ, ಯಲ್ಲಪ್ಪ ನಾರಾಯಣ ಪಾಟೀಲ, ದೇವಸ್ಥಾನದ ಕಮೀಟಿಯವರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ