ಪ್ರಗತಿ ವಾಹಿನಿ ಸುದ್ದಿ, ಕೋಲಾರ:
ಟಿಕ್ ಟಾಕ್ ಮಾಡುತ್ತಿದ್ದ ಬಾಲಕಿಯೋರ್ವಳು ಕೃಷಿ ಹೊಂಡಕ್ಕೆ ಬಿದ್ದು ಸಾವಿಗೀಡಾಗಿದ್ದಾಳೆ.
ಕೋಲಾರದ ವಡಗೇರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಾಲಾ ಎನ್ನುವ ವಿದ್ಯಾರ್ಥಿನಿ ಸಾವಿಗೀಡಾದವಳು.
ಕೋಲಾರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ತುಮಕೂರಿನಲ್ಲೂ ಕೂಡ ಇಂತಹದ್ದೇ ಘಟನೆಯೊಂದು ನಡೆದಿತ್ತು. ಓಡಿಬಂದು ಸ್ನೇಹಿತನ ಸಹಾಯದಿಂದ ಹಾರಿ ಉಲ್ಟಾ ನೆಗೆದು ಅದನ್ನು ಸ್ಲೋಮೋಶನ್ನಲ್ಲಿ ಶೂಟ್ ಮಾಡಿ ಟಿಕ್ಟಾಕ್ಗೆ ಅಪ್ಲೋಡ್ ಮಾಡಲು ಹೋಗಿ ಕುತ್ತಿಗೆ ನೆಲಕ್ಕೆ ತಾಗಿ ಬೆನ್ನುಮೂಳೆ ಮುರಿದು ಬಾಲಕನೋರ್ವ ಮೃತಪಟ್ಟಿದ್ದ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ