ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮನೆಗಳ್ಳನನ್ನು ಬಂಧಿಸಿರುವ ಕ್ಯಾಂಪ್ ಠಾಣೆ ಪೊಲೀಸರು 1.95 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಳಿಅಂಬ್ರಾಯಿಯ ಸೂರಜ್ ಅಜಯ ಬನಸ್ಕರ (೨೩) ಬಂಧಿತ ಆರೋಪಿ.
ಲಕ್ಷ್ಮಿಟೆಕ್ ಪ್ರದೇಶದ ವಾಸುದೇವ ನಾರಾಯಣ ಪಾರ್ವತಿಕರ್ ಚುನಾವಣೆಯ ಕರ್ತವ್ಯಗಳಿಗೆ ಮನೆಗೆ ಕೀಲಿ ಹಾಕಿಕೊಂಡು ಹೋದಾಗ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ತೆಗೆದು ಒಳಗೆ ಹೊಕ್ಕು ಅಲ್ಮೇರಾದಲ್ಲಿದ್ದ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ಕಳುವು ಮಾಡಿಕೊಂಡು ಹೋಗಿದ್ದರು. ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿ ಪತ್ತೆಗಾಗಿ ಬಲೆ ಬೀಸಲಾಗಿತ್ತು.
ಚನ್ನಕೇಶವ ಬಿ ಟಿಂಗರಿಕರ ಪಿ.ಐ ಕ್ಯಾಂಪ್ ಹಾಗೂ ಅವರ ಸಿಬ್ಬಂದಿಗಳಾದ ಮಂಜುನಾಥ, ಪಿ.ಎಸ್.ಐ ಮತ್ತು ಬಿ.ಆರ್. ಡೂಗ ಎ.ಎಸ್.ಐ , ಎಮ್.ವಾಯ್.ಹುಕ್ಕೇರಿ ಎ.ಎಸ್.ಐ ಹಾಗೂ ಪಿ ಬಿ ಡೊಳ್ಳಿ, ಜೆ.ಎಂ ಮಗದುಮ್ಮ, ಆರ್.ಎಸ್. ಪೂಜೇರಿ, ಬಿ.ಬಿ. ಗೌಡರ, ಕೆ.ಎಮ್. ಬನೋಶಿ, ಮಹೇಶ ಪಾಟೀಲ, ಬಿ.ಎಮ್. ನರಗುಂದ, ಬಿ.ಎಮ್. ಕಲ್ಲಪ್ಪನವರ, ಎ.ಬಿ. ಘಟ್ಟದ, ಅರುಣಕುಮಾರ ಪಾಟೀಲ ಇವರು ಸಂಶಯುಕ್ತ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ್ದಾರೆ.
ಇನ್ನೊಬ್ಬ ಆರೋಪಿ ಪರಾರಿ ಇದ್ದು ಅವನ ಪತ್ತೆಗಾಗೆ ತನಿಖೆ ಮುಂದುವರೆಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ