Belagavi NewsBelgaum NewsKannada NewsKarnataka NewsTravel
*ಬೆಳಗಾವಿ ನಗರದ ಈ ರಸ್ತೆಯಲ್ಲಿ ಏಕಮುಖ ಸಂಚಾರ: ನಗರ ಪೊಲೀಸ್ ಆಯುಕ್ತ ಆದೇಶ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರ ರಸ್ತೆ ಸಂಚಾರ ಸುರಕ್ಷತೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಾಗೂ ಸುಧಾರಣಾ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಬೆಳಗಾವಿ ನಗರದ ಕಚೇರಿಗಲ್ಲಿ ರಸ್ತೆಯನ್ನು ಅಂದರೆ ಉತ್ತರದಿಂದ ದಕ್ಷಿಣಕ್ಕೆ ಬಡಕಲಗಲ್ಲಿ ಕ್ರಾಸ್ ವರೆಗೆ ಏಕಮುಖ ಸಂಚಾರವನ್ನಾಗಿ ಮಾಡಲಾಗಿದೆ, ಶನಿವಾರ ಕೂಟದಿಂದ ಕಚೇರಿಗಲ್ಲಿಯ ಮಾರ್ಗವಾಗಿ ನಾಲ್ಕು ಚಕ್ರದ ಮತ್ತು ಮೂರು ಚಕ್ರದ ವಾಹನಗಳು ಬಡಕಲಗಲ್ಲಿ ಕ್ರಾಸವರೆಗೆ ಬರುವುದಾಗಿದ್ದು ನಂತರ ಬಡಕಲ್ ಗಲ್ಲಿಯಿಂದ ನಿರ್ಗಮಿಸಬೇಕಾಗುತ್ತದೆ. ಈ ನಿರ್ಬಂಧವು ದ್ವಿ ಚಕ್ರ ವಾಹನಗಳಿಗೆ ಅನ್ವಯಿಸುವುದಿಲ್ಲಾ ಎಂದು ನಗರ ಪೊಲೀಸ್ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.



