Karnataka News

*ಆನ್ ಲೈನ್ ಬೆಟ್ಟಿಂಗ್: ಒಂದೇ ಕುಟುಂಬದ ಮೂವರು ಆತ್ಮಹತ್ಯೆ*

ಮೈದಾನದಲ್ಲಿ ಇಬ್ಬರ ಶವಪತ್ತೆಗೆ ಬಿಗ್ ಟ್ವಿಸ್ಟ್

ಪ್ರಗತಿವಾಹಿನಿ ಸುದ್ದಿ: ಆನ್ ಲೈನ್ ಮೂಲಕ ಐಪಿಎಲ್ ಬೆಟ್ಟಿಂಗ್ ಆಮಿಷ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

ಮೈಸೂರಿನ ವಿಜಯನಗರ ಮೈದಾನದಲ್ಲಿ ಇಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಐಪಿಎಲ್, ಆನ್ ಲೈನ್ ಬೆಟ್ಟಿಂಗ್ ಗೆ ಅಣ್ಣ, ತಮ್ಮ, ತಮ್ಮನ ಪತ್ನಿ ಮೂವರು ಬಲಿಯಾಗಿದ್ದಾರೆ.

ನಿನ್ನೆ ಮೈಸೂರಿನ ಹಂಚ್ಯಾ ಗ್ರಾಮದ ಆಂಟನಿ ಎಂಬುವವರು ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋ ವೈರಲ್ ಆಗಿತ್ತು. ನನ್ನ ಸಾವಿಗೆ ನನ್ನ ತಮ್ಮ ಜೋಬಿ, ಆತನ ಪತ್ನಿ ಶರ್ಮಿಳಾ ಕಾರಣ. ಆನ್ ಲೈನ್ ಬೆಟ್ಟಿಂಗ್ ಗೆ ಹಣ ತೊಡಗಿಸಿ ಎಲ್ಲರನ್ನೂ ವಂಚಿಸುತ್ತಿದ್ದರು. ಅವರು ಮೋಸದಿಂದ ಸಾಲ ಮಾಡಿಸಿದ್ದಾರೆ. ಹಣ ಕೇಳಿದರೆ ವಾಪಸ್ ಕೊಡದೇ ವಂಚಿಸಿದ್ದಾರೆ. ಅವರ ಮೋಸದಾಟಕ್ಕೆ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಅವರಿಗೆ ಶಿಕ್ಷೆ ಕೊಡಿಸಿ ಎಂದು ಕಣ್ಣೀರಿಟ್ಟಿದ್ದರು.

Home add -Advt

ಆಟನಿ ಆತ್ಮಹತ್ಯೆ ಬಳಿಕ ಅವರ ತಮ್ಮ- ತಮ್ಮನ ಪತ್ನಿ ನಾಪತ್ತೆಯಾಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಹುಡುಕಾಟ ನಡೆಸಿದ್ದರು. ಆದರೆ ಇಂದು ಬೆಳಿಗ್ಗೆ ಮೈಸೂರಿನ ವಿಜಯನಗರದಲ್ಲಿ ಮೈದಾನವೊಂಡರಲ್ಲಿ ಓರ್ವ ಪುರುಷ ಹಾಗೂ ಮಹಿಳೆ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರಿಗೆ ಇವರು ಆಂಟನಿ ತಮ್ಮ ಜೋಬಿ ಹಾಗೂ ಆತನ ಪತ್ನಿ ಶರ್ಮಿಳಾ ಎಂಬುದು ಗೊತ್ತಾಗಿದೆ.

ಐಪಿಎಲ್ ಬೆಟ್ಟಿಂಗ್, ಆನ್ ಲೈನ್ ಬೆಟ್ಟಿಂಗ್ ವ್ಯಾಮೋಹಕ್ಕೆ ಒಂದೇ ಕುಟುಂಬದ ಮೂವರು ಬಲಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button