ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜಾಹೀರಾತು ನೋಡಿ ಹಣ ಸಂಪಾದಿಸಿ ಎಂದು ಆನ್ ಲೈನ್ ಮೂಲಕ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೆ.ವಿ ಜಾನಿ ಎಂದು ಗುರುತಿಸಲಾಗಿದ್ದು, ಅರ್ಧಗಂಟೆ ಜಾಹೀರಾತು ನೋಡಿದರೆ ದಿನಕ್ಕೆ 240 ರೂ. ಹಣ ಸಂಪಾದಿಸಬಹುದು ಎಂದು www.jalilifstle.com ಎಂಬ ವೆಬ್ ಸೈಟ್ ಮುಖಾಂತರ ಆರೋಪಿ ವಂಚಿಸುತಿದ್ದ.
1109 ರೂಪಾಯಿ ನೀಡಿ ಸದಸ್ಯತ್ವ ಪಡೆದುಕೊಂಡರೆ ತಿಂಗಳಿಗೆ 7200 ರೂಪಾಯಿ ವರ್ಷಕ್ಕೆ 86,400 ರೂಪಾಯಿ ಸಂಪಾದಿಸಬಹುದು. ಇದೇ ರೀತಿ ಒಬ್ಬ ಸದಸ್ಯ 10 ಸದಸ್ಯರನ್ನು ಸೇರಿಸಬೇಕು ಹೀಗೆ ಮಾಡಿದರೆ ಒಬ್ಬ ಸದಸ್ಯನಿಗೆ 4400 ರೂಪಾಯಿ ಲಾಭ ಸಿಗಲಿದೆ ಎಂದು ಚೈನ್ ಲಿಂಕ್ ರೀತಿಯಲ್ಲಿ ಆನ್ ಲೈನ್ ಮೂಲಕ ವಂಚಿಸುತ್ತಿದ್ದ.
ಬರೋಬ್ಬರಿ ನಾಲ್ಕು ಲಕ್ಷ ಜನರಿಗೆ ಪ್ರಾಜೆಕ್ಟ್ ಹೆಸರಲ್ಲಿ ಮೋಸ ಮಾಡಿದ್ದ. ಜಾನಿಯಿಂದ ವಂಚನೆಗೊಳಗಾದವರು ನೀಡಿದ ದೂರಿನ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ಕೈದು ದಿನಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಲಾಕ್ಡೌನ್ ತೆರವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ