ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 1ರಿಂದ 7ನೇ ತರಗತಿವರೆಗೆ ಆನ್ ಲೈನ್ ಶಿಕ್ಷಣ ಮಾಡಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿಕೆ ನೀಡಿದ ಬೆನ್ನಲ್ಲೇ ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂತಹ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸಚಿವರಿಬ್ಬರು ದ್ವಂಧ್ವ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಏಳನೇ ತರಗತಿಯವರೆಗೆ ಆನ್ಲೈನ್ ಪಾಠಕ್ಕೆ ಅವಕಾಶ ನೀಡಬಾರದು ಎಂಬುದು ಕೆಲ ಸಂಪುಟ ಸದಸ್ಯರ ಸಲಹೆ ಮಾತ್ರವಾಗಿದೆ. ಅನೌಪಚಾರಿಕವಾಗಿ ನಡೆದ ಚರ್ಚೆಯ ವೇಳೆ ಬಂದ ಸಲಹೆ ಇದಾಗಿದೆ. ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ತಮ್ಮ ಟ್ವೀಟ್ನಲ್ಲಿ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
1ರಿಂದ 5ನೇ ತರಗತಿವರೆಗೆ ಆನ್ ಲೈನ್ ಕ್ಲಾಸ್ ರದ್ದುಪಡಿಸಲಾಗಿದೆ. 7ನೇ ತರಗತಿವರೆಗೂ ಆನ್ ಲೈನ್ ಕ್ಲಾಸ್ ರದ್ದು ಮಾಡಬೇಕು ಎಂಬ ಸಲಹೆ ಬಂದಿದೆ ಅಷ್ಟೇ. ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದರು. ಸಚಿವರಿಬ್ಬರ ಗೊಂದಲದ ಹೇಳಿಕೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಮತೆ ದ್ವಂಧ್ವಕ್ಕೆ ಸಿಲುಕಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ