Latest

ರಾಜ್ಯದಲ್ಲಿ ಇಂದು 204 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಇಂದು 204 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 6245ಕ್ಕೆ ಏರಿಕೆಯಾಗಿದೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ರಾಯಚೂರು 15, ಯಾದಗಿರಿ 66, ಬೆಂಗಳೂರು ನಗರ 12, ಶಿವಮೊಗ್ಗ 10, ದಾವಣಗೆರೆ 9, ಬಾಗಲಕೋಟೆ 3, ಉತ್ತರ ಕನ್ನಡ 3, ವಿಜಯಪುರ4, ಬೀದರ್ 14, ಕೋಲಾರ 6, ಮೈಸೂರು 5, ದಕ್ಷಿಣ ಕನ್ನಡ 2, ಧಾರವಾಡ 2, ಹಾಸನ 2 ಕೇಸ್ ಪತ್ತೆಯಾಗಿದೆ.

ರಾಜ್ಯದಲ್ಲಿ ಇಂದು ಸೋಂಕಿಗೆ ಮೂವರು ಬಲಿಯಾಗಿದ್ದು ಈ ಮೂಲಕ 72 ಜನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.

Related Articles

Back to top button