ಆನ್ ಲೈನ್ ಗೇಮ್ ಚಟ: 65 ಲಕ್ಷ ರೂ. ಕಳೆದುಕೊಂಡ ಶಿರಸಿ ಯುವಕ ನೇಣಿಗೆ ಶರಣು

ಪ್ರಗತಿವಾಹಿನಿ ಸುದ್ದಿ, ಶಿರಸಿ: ಆನ್‌ಲೈನ್ ಗೇಮ್ ಚಟಕ್ಕೆ ಬಲಿಯಾದ ಶಿರಸಿ ತಾಲೂಕಿನ ಬಾಳೆತೋಟದ ಯುವಕನೋರ್ವ ಅಪಾರ ಹಣ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬಾಳೆತೋಟ ನಿವಾಸಿ ವಿಜೇತ ಶಾಂತಾರಾಮ ಹೆಗಡೆ (37) ಆತ್ಮಹತ್ಯೆಗೆ ಶರಣಾದ ವಿವಾಹಿತ ಯುವಕ. ಪಕ್ಕದ ಕುಳವೆ ಬೆಟ್ಟದಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ ಆನ್ ಲೈನ್ ಗೇಮ್ ಚಟಕ್ಕೆ ಬಲಿಯಾಗಿ ಸುಮಾರು 65 ಲಕ್ಷ ರೂ. ಕಳೆದುಕೊಂಡಿದ್ದ ಎನ್ನಲಾಗಿದೆ. ಶುಕ್ರವಾರ ರಾತ್ರಿ ಬೆಂಗಳೂರಿಗೆ ತೆರಳುತ್ತೇನೆಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ಬೆಂಗಳೂರಿಗೆ ತೆರಳದೇ ಕುಳವೆ ಅರಣ್ಯ ಪ್ರದೇಶದಲ್ಲಿ ನೇಣಿಗೆ ಶರಣಾಗಿದ್ದಾನೆ.
ಕುಟುಂಬಸ್ಥರು ಬೆಳಿಗ್ಗೆ ಗ್ರಾಮೀಣ ಠಾಣೆಗೆ ನಾಪತ್ತೆ ಪ್ರಕರಣ ನೀಡಲು ಆಗಮಿಸಿದಾಗ ಪೊಲೀಸರು ಮೊಬೈಲ್ ಲೊಕೇಶನ್ ಪತ್ತೆ ಹಚ್ಚಿದಾಗ ಕುಳವೆ ಅರಣ್ಯ ಪ್ರದೇಶದಲ್ಲಿ ಮೊಬೈಲ್ ಇರುವಿಕೆ ಪತ್ತೆಯಾದಾಗ ಅಲ್ಲಿಗೆ ತೆರಳಿದಾಗ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿರುವುದು ಕಂಡು ಬಂದಿದೆ. ಡೆತ್ ನೋಟ್ ಕೂಡ ಪತ್ತೆಯಾಗಿದೆ ಎನ್ನಲಾಗಿದೆ.
ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನಸ್ಪೆಕ್ಟರ್ ಸೀತಾರಾಮ ಪಿ ಅವರು ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ