ಪ್ರಗತಿವಾಹಿನಿ ಸುದ್ದಿ, ಹಳಿಯಾಳ – ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಸಿ.ಇ.ಟಿ ಪ್ರವೇಶಾತಿ ಕುರಿತು ಆನ್‌ಲೈನ್ ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಿರಸಿಯ ಮಾರಿಕಾಂಬಾ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಂಶುಪಾಲರು ಮತ್ತು ಸಿ.ಇ.ಟಿ ಸೆಲ್ ನೋಡಲ್ ಅಧಿಕಾರಿಗಳಾದ ಪ್ರೊ.ಭಾಲಚಂದ್ರ ಭಟ್ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿ.ಇ.ಟಿ ಪ್ರವೇಶ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿದರು.
ಬೆಳಿಗ್ಗೆ ೧೦ ಗಂಟೆಗೆ ಪ್ರಾರಂಭವಾದ ಈ ಆನ್‌ಲೈನ್ ನೇರ ಸಂರ್ಶನ ಕಾರ್ಯಕ್ರಮದಲ್ಲಿ ಸಿ.ಇ.ಟಿ ಪರೀಕ್ಷೆ ಮುಖಾಂತರ ಇಂಜನಿಯರಿಂಗ್ ಮತ್ತು ಮೆಡಿಕಲ್ ಪದವಿಗೆ ಸೇರಬಯಸುವ ೭೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಿ.ಇ.ಟಿ ಪ್ರವೇಶ ಪ್ರಕ್ರಿಯೆಯಲ್ಲಿರುವ ಡಾಕ್ಯುಮೆಂಟ್ ಅಪ್ಲೋಡ್, ಆಪ್ಶನ್ ಎಂಟ್ರಿ ಮತ್ತು ಹಲವಾರು ವಿಷಯಗಳ ಕುರಿತು ವಿದ್ಯಾಥಿಗಳು ತಮಗೆ ಇರುವ ಸಂದೇಹಗಳನ್ನು ನೋಡಲ್ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹರಿಸಿಕೊಂಡರು.
ವಿದ್ಯಾಥಿಗಳು ಈ ಕಾರ್ಯಕ್ರಮದಲ್ಲಿ ಇ-ಮೇಲ್, ಮೊಬೈಲ್ ಸಂಖ್ಯೆ ಮತ್ತು ವೆಬ್ಸೈಟ್ ಮುಖಾಂತರ ಪ್ರಶ್ನೆ ಕೇಳಲು ಅವಕಾಶ ಕಲ್ಪಿಸಲಾಗಿತ್ತು ಹಾಗೂ ಕಾರ್ಯಕ್ರಮದ ನೇರ ಪ್ರಸಾರವನ್ನು ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಮಾಡಲಾಯಿತು.
೨ ತಾಸುಗಳಿಗೂ ಹೆಚ್ಚು ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಬೆಂಗಳೂರು, ವಿಜಾಪುರ, ಮುಧೋಳ, ಧಾರವಾಡ, ಹುಬ್ಬಳ್ಳಿ, ಶಿರಸಿ, ಕಾರವಾರ ಬೆಳಗಾವಿ ಮತ್ತು ಹಾವೇರಿ ಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವಿ ವಿ ಕಟ್ಟಿ, ಉಪ ಪ್ರಾಂಶುಪಾಲರಾದ ಡಾ. ವಿ ಎ ಕುಲಕಣ , ಕೆ.ಎಲ್.ಎಸ್ ಪದವಿಪೂರ್ವ ಮಹಾವಿದ್ಯಾಯಲದ ಪ್ರಾಂಶುಪಾಲರಾದ ಡಾ. ಸಮೀರ ಗಲಗಲಿ ಮತ್ತು ಪ್ರೊ. ಎಸ್ ಡಿ ಕುಲಕರ್ಣಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ