Latest

ಮೊದಲ ಹಂತದಲ್ಲಿ ಕೇವಲ 10 ಸಚಿವರ ಪ್ರಮಾಣವಚನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಇಂದು ಮಧ್ಯಾಹ್ನ 12.30ಕ್ಕೆ ಕಾಂಗ್ರೆಸ್ ಸರಕಾರದ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಕ್ಕಾಗಿ ಕಂಠೀರವ ಕ್ರೀಡಾಂಗಣ ಸಿದ್ಧವಾಗಿದೆ.

ಇಂದು ಮೊದಲ ಹಂತದಲ್ಲಿ 10 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಶನಿವಾರ ಬೆಳಗಿನಜಾವದವರೆಗೂ ನವದೆಹಲಿಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಹೈಕಮಾಂಡ್ ಜೊತೆಗ ಚರ್ಚೆ ನಡೆಸಿದ್ದು, ಬೆಳಗಿನಜಾವ ಬೆಂಗಳೂರಿಗೆ ವಾಪಸ್ ಹೊರಟಿದ್ದಾರೆ. ಸಿದ್ದರಾಮಯ್ಯ ಈಗಾಗಲೆ ಬೆಂಗಳೂರಿಗೆ ತಲುಪಿದ್ದು, ಇನ್ನೇನು ಕೆಲ ಕ್ಷಣಗಳಲ್ಲಿ ಡಿ.ಕೆ.ಶಿವಕುಮಾರ ಸಹ ತಲುಪಲಿದ್ದಾರೆ.

ಕೇವಲ 10 ಜನರು ಮಾತ್ರ ಮೊದಲ ಹಂತದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರ ಜೊತೆಗೆ ರಾಮಲಿಂಗಾ ರಡ್ಡಿ, ಕೆಎಚ್,ಮುನಿಯಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಎಂ.ಬಿ.ಪಾಟೀಲ, ಕೆ.ಜೆ.ಜಾರ್ಜ್, ಜಿ.ಪರಮೇಶ್ವರ, ಜಮೀರ್ ಅಹ್ಮದ್ ಮಾತ್ರ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, 2-3 ದಿನದಲ್ಲಿ ಮತ್ತೆ ಇನ್ನಷ್ಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವ ಮಾಹಿತಿ ಬಂದಿದೆ.

Home add -Advt
https://pragati.taskdun.com/list-of-new-ministers-coming-out-overnight/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button