Kannada NewsLatest

ಭವಿಷ್ಯಕ್ಕಾಗಿ ಇತಿಹಾಸ ಅರಿಯುವ ವ್ಯಕ್ತಿಯಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ: “ಭವ್ಯ ಭಾರತದ ಇತಿಹಾಸ ದೇಶದ ಭವಿಷ್ಯಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದು, ಭವಿಷ್ಯಕ್ಕಾಗಿ ಇತಿಹಾಸ ಅರಿಯುವ ವ್ಯಕ್ತಿಯಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ” ಎಂದು ಆದಿಚುಂಚನಗಿರಿಮಠದ ಆಡಳಿತಾಧಿಕಾರಿ ಜೆ.ಎನ್. ರಾಮಕೃಷ್ಣೇಗೌಡ ಹೇಳಿದರು.

ಸಮೀಪದ ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಬುಧವಾರ ಸಂಜೆ ನಡೆದ ಮಹಾಶಿವರಾತ್ರಿ ಮಹೋತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಶಿವಶರಣರ ಉದ್ದೇಶಗಳನ್ನುಉಳಿಸಿ-ಬೆಳೆಸುವ ಕಾರ್ಯ ಇಂದಿನ ಮಠಮಾನ್ಯಗಳು ಹಾಗೂ ಮಠಾಧೀಶರಿಂದಾಗುತ್ತಿದೆ. ಇತಿಹಾಸದ ಪ್ರೇರಣೆ ಪಡೆದ ವ್ಯಕ್ತಿ, ಮೌಲ್ಯಗಳು ಸಮಾಜದಲ್ಲಿ ಹೊಸ ರೂಪ ಪಡೆಯುತ್ತವೆ ಎಂದರು.

ಬೆಂಗಳೂರಿನ ತಜ್ಞ ವೈದ್ಯೆ ಡಾ.ವಿಜಯಲಕ್ಷ್ಮೀ ಬಾಳೇಕುಂದ್ರಿ ಮಾತನಾಡಿ, ಮಠಗಳು ಕೇವಲ ಧರ್ಮ ಪ್ರಚಾರದ ಕೇಂದ್ರಗಳಾಗದೆ, ಸಮಾಜದ ಎಲ್ಲ ವರ್ಗಗಳ ಜನರಲ್ಲಿ ಜಾಗೃತಿ ಮೂಡಿಸಿ, ಸರಿ-ತಪ್ಪುಗಳ  ತಿಳಿವಳಿಕೆ ನೀಡುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣದಲ್ಲಿ ತೊಡಗಿವೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿಗೆ ಪ್ರಾತಿನಿಧ್ಯ ನೀಡುವಲ್ಲಿ ಮಠಗಳು ಪ್ರಮುಖ ಪಾತ್ರ ವಹಿಸಿವೆ ಎಂದರು.

ಪ್ರವಚನಕಾರ ವೀರೇಶ ಶರಣರು ಮಾತನಾಡಿ, ಭಾರತದ ಇಂದಿನ ಗತವೈಭವಕ್ಕೆ ಸಹಸ್ರಾರು ತ್ಯಾಗಿಗಳ ಪರಿಶ್ರಮ ಅಡಗಿದ್ದು, ದೇಶದ ಸಂಸ್ಕೃತಿ ಆಚಾರ-ವಿಚಾರಗಳನ್ನು ಹೃದಯದಿಂದ ಗೌರವಿಸುವುದೇ ದೇಶಪ್ರೇಮ. ಈ ಹಿಂದೆ ಶಿಲಾಯುಗದಲ್ಲಿ ಮನುಷ್ಯ ತನ್ನ ಉಪಜೀವನಕ್ಕಾಗಿ ಶಿಲೆಗಳನ್ನೇ ಬಳಸುತ್ತಿದ್ದ ಕಾರಣಕ್ಕೆ ‘ಶಿಲಾಯುಗ’ ಎಂದು ಕರೆಯಲಾಯಿತು. ಸಿಂಧು ನಾಗರಿಕತೆ ಮನುಷ್ಯನ ಬದುಕಿನಲ್ಲಿ ಬದಲಾವಣೆ ತಂದಿತು. ಭಾರತದ ಸಂಪತ್ತನ್ನು ಕೊಂಡೊಯ್ಯಲು ಬ್ರಿಟಿಷರು ರೈಲು ಕಂಡುಹಿಡಿದಿದ್ದು ಅಂದಿನ ದೊಡ್ಡ ಸಾಧನೆಯಾಗಿತ್ತು. ಅಂತೆಯೇ ದೇಶದ ಸಾಧನೆಗಳ ಜೊತೆಗೆ ವೈಫಲ್ಯಗಳನ್ನು ಅರಿಯುವುದು ಅಗತ್ಯವಾಗಿದೆ ಎಂದರು.

ಜಗದ್ಗುರು ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಚಿಕ್ಕೋಡಿ ಸಂಪಾದನಾ ಸ್ವಾಮೀಜಿ, ಮಜಲಟ್ಟಿಯ ಬಸವಪ್ರಭು ಮಹಾರಾಜರು ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಜು ಪಾಟೀಲ, ರಾಜು ಯರಗಟ್ಟಿ, ಶಿವಾನಂದ ಪದ್ಮಣ್ಣವರ. ಬಸವಣ್ಣಿ ಹೆಗ್ಗಾಯಿ, ಅಣ್ಣಪ್ಪಾ ಮಗದುಮ್ಮ, ಮಲ್ಲಪ್ಪಾ ತನೋಡಿ, ಬಾಬು ಮಾಳಿ ಇನ್ನಿತರು ಉಪಸ್ಥಿತರಿದ್ದರು.

ಸುನೀತಾ ಬಾಗೇವಾಡಿ ಸ್ವಾಗತಿಸಿದರು. ಶೋಭಾ ಮುತಗಿ ಪರಿಚಯಿಸಿ, ಶ್ವೇತಾ ಗೌಡಾಡಿ ನಿರೂಪಿಸಿದರು. ಸಂತೋಷ ಪಾಟೀಲ ವಂದಿಸಿದರು.
ಜ್ಯೋತಿರ್ಲಿಂಗಗಳ ವೈಶಿಷ್ಟ್ಯಗಳು

https://pragati.taskdun.com/features-of-jyotirlingas-a-special-article-by-sanatana-samsthe/

ಎನ್‌ಆರ್‌ಇಜಿಎಸ್ ಅಡಿಯಲ್ಲಿ ಕರ್ನಾಟಕಕ್ಕೆ ಬಿಡುಗಡೆಯಾದ ಮೊತ್ತವೆಷ್ಟು ಗೊತ್ತೇ?

https://pragati.taskdun.com/6028-07-crores-to-the-state-of-karnataka-for-the-year-2021-22-under-nregs-release/

ಗೃಹ ಸಚಿವ ಅರಗ ಜ್ಞಾನೇಂದ್ರರಿಂದ ದ್ವೇಷದ ರಾಜಕೀಯ: ಡಿಕೆಶಿ ಆರೋಪ

https://pragati.taskdun.com/hate-politics-by-home-minister-araga-gyanendra-d-k-shivkumar-accuses/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button