ಖಾನಾಪುರಕ್ಕೆ ಎರಡೇ ಮಾರ್ಗ; ರೈಲು ಮಾರ್ಗವೂ ಡೇಂಜರ್
ಪ್ರಗತಿವಾಹಿನಿ ಸುದ್ದಿ, ಖಾನಾಪುರ –
ಭಾರಿ ಮಳೆ, ಪ್ರವಾಹದಿಂದಾಗಿ ಖಾನಾಪುರಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಮಾರ್ಗಗಳು ಕಡಿತಗೊಂಡಿವೆ. ಇದೀಗ ರೈಲ್ವೆ ಮಾರ್ಗವೂ ಅಪಾಯದಲ್ಲಿದೆ.
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ತೀರದ ಗ್ರಾಮಗಳು ಅಪಾಯದಲ್ಲಿವೆ. ಬಹುತೇಕ ಸೇತುವೆಗಳು ಮುಳುಗಡೆಯಾಗಿವೆ. ಹೊಲ ಗದ್ದೆಗಳೂ ಸಂಪೂರ್ಣ ಮುಳುಗಡೆಯಾಗಿವೆ.
ಬೆಳಗಾವಿ ಮತ್ತು ಪಾರಿಶ್ವಾಡ ಮಾರ್ಗಗಳು ಮಾತ್ರ ಸಂಚಾರಕ್ಕೆ ಮುಕ್ತವಾಗಿವೆ. ಉಳಿದೆಲ್ಲ ಬಂದ್ ಆಗಿವೆ.
ಲೋಂಡಾ ತಿನೈ ಘಾಟ್ ನಡುವೆ ಭಾರಿ ಮಳೆಗೆ ಭೂ ಕುಸಿತ ಉಂಟಾಗಿ ರೈಲ್ವೆ ಹಳಿಗಳು ಅಪಾಯದಲ್ಲಿವೆ. ಹಿರಿಯ ಅಧಿಕಾರಿಗಳು ಸ್ಥಳ ವೀಕ್ಷಣೆ ನಡೆಸಿದ್ದು, ತುರ್ತು ದುರಸ್ತಿಗೆ ಕ್ರಮ ತೆಗೆದುಕೊಂಡಿದ್ದಾರೆ. ಆದಾಗ್ಯೂ ಕೆಲಕಾಲ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಲೋಂಡಾ ತಿನೈಘಾಟ ಮಧ್ಯದ ಕಿಮೀ. 001/100-200 ನಡುವೆ ಲ್ಯಾಂಡ್ ಸ್ಲೈಡಿಂಗ್ ಆಗಿದ್ದು, ದುರಸ್ತಿ ನಡೆದಿದೆ.
ಖಾನಾಪುರ ತಾಲೂಕಿನ ಬಹುತೇಕ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದೆ. ಅರಣ್ಯದಂಚಿನ ಕೆಲವು ಗ್ರಾಮಗಳು ಎಲ್ಲ ರೀತಿಯ ಸಂಪರ್ಕವನ್ನೂ ಕಡಿದುಕೊಂಡಿವೆ. ಖಾನಾಪುರದ ಪೊಲೀಸ್ ತರಬೇತಿ ಶಾಲೆಯ ವಸತಿಗೃಹಗಳಿಗೆ ನೀರು ನುಗ್ಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ