Kannada NewsKarnataka NewsLatest

ಶ್ರೀ ಮಹಾವೀರ ಸೌಹಾರ್ದ ಸಹಕಾರಿ ಬ್ಯಾಂಕಿನ ನೂತನ ಕಟ್ಟಡ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಎಲ್ಲ ಸಮುದಾಯದವರ ವಿಶ್ವಾಸ, ನಂಬಿಕೆ ಪಡೆದು ಇಂದು ಉತ್ತುಂಗಕ್ಕೆ ಏರುತ್ತಿರುವ ಶ್ರೀ ಮಹಾವೀರ ಸೌಹಾರ್ದ ಸಹಕಾರಿಯ ಕಾರ್ಯ ಮೆಚ್ಚವಂತದ್ದು ಎಂದು ಮಾಜಿ ಶಾಸಕ ಸಂಜಯ ಪಾಟೀಲ ಹೇಳಿದರು.
ಅವರು ಶುಕ್ರವಾರ ಶ್ರೀ ಮಹಾವೀರ ಸೌಹಾರ್ದ ಸಹಕಾರಿ ಬ್ಯಾಂಕಿನ ಬೆಳಗಾವಿ ಉದ್ಯಮಭಾಗದ ಶಾಖೆಯ ನೂತನ ಕಟ್ಟಡದ ವಾಸ್ತು ಶಾಂತಿ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವಾಣಿಜ್ಯ ಬ್ಯಾಂಕುಗಳಿಂದ ಅಷ್ಟು ಸುಭದಲ್ಲಿ ಸಾಲ ಪಡೆಯಲು ಸಾಧ್ಯವಿಲ್ಲ. ಆದರೆ ಸಹಕಾರಿ ಬ್ಯಾಂಕಿನಲ್ಲಿ ಸರಿಯಾದ ವ್ಯವಹಾರ ಹೊಂದಿದ ವ್ಯಕ್ತಿ ಶೀಘ್ರದಲ್ಲಿ ಸಾಲದ ಸೌಲಭ್ಯ ಪಡೆದು ಆರ್ಥಿಕವಾಗಿ ಸದೃಡವಾಗಬಹುದು ಎಂದರು.
ಮುಖಂಡರಾದ ಬಸವರಾಜ ಮಟಗಾರ ಮಾತನಾಡಿ, ಸಹಕಾರಿ ಸಂಘಗಳನ್ನು ಕಟ್ಟಿ ಬೆಳೆಸುವುದು ಕಷ್ಟಕರ. ಆದರೂ ಕಡಿಮೆ ಅವಧಿಯಲ್ಲಿ ಜನರ ವಿಶ್ವಾಸಗಳಿಸಿ ಜನ ಸಾಮನ್ಯರೊಂದಿಗೆ ಸ್ಪಂದಿಸುತ್ತಿರುವ ಅಧ್ಯಕ್ಷ ಮಹಾವೀರ ನಿಲಜಗಿ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಮಹಾವೀರ ನಿಲಜಗಿ ಅಧ್ಯಕ್ಷತೆವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಲಹಾ ಸಮಿತಿ ನಿರ್ದೇಶಕರಾದ ಬಾಹುಬಲಿ ಕುಡಚಿ, ವಿಜಯ ಪಾಟೀಲ, ಬಾಹುಬಲಿ ಪರಮಾಜ, ಮಹಾವೀರ ಬಸ್ತವಾಡ, ಬಾಹುಬಲಿ ಸೊಲ್ಲಾಪೂರೆ, ಭರಮಪ್ಪಾ ಲಠೆ, ಸಿದ್ದಪ್ಪಾ ಕಂಠಿಕಾರ, ಕಿರಣ ಸೊಲ್ಲಾಪೂರೆ ಸುಂಕಮಾರ ಖತಗಲ್ಲಿ ವಿನೋದ ನಿಂಗಪ್ಪಗೋಳ, ಮಹಾವೀರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಜು ನಿಲಜಗಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ರಾಜೇಂದ್ರ ಪಾಟೀಲ, ಪ್ರಜ್ವಲ ನಿಲಜಗಿ ಸೇರಿದಂತೆ ಎಲ್ಲ ಶಾಖೆಗಳ ಸದಸ್ಯರು ಗ್ರಾಹಕರು ಉಪಸ್ಥಿತರಿದ್ದರು.

ಮಹಾವೀರ ಬ್ಯಾಂಕ್ ನೂತನ ಕಟ್ಟಡದ ವಾಸ್ತು ಶಾಂತಿ ಹಾಗೂ ಉದ್ಘಾಟನಾ ಸಮಾರಂಭ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button