Kannada NewsKarnataka News

ಸೌಹಾರ್ದ ಸಹಕಾರಿ ಸಂಸ್ಥೆಯ ಶಾಖೆಯ ನೂತನ ಕಟ್ಟಡ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಗ್ರಾಮೀಣ ಭಾಗದ ಅಭಿವೃದ್ಧಿ ಹಾಗೂ ಆರ್ಥಿಕ ಉನ್ನತಿಗಾಗಿ ಸಹಕಾರಿ ರಂಗದಲ್ಲಿ ಸ್ಥಾಪಿಸಿರುವ ಸಹಕಾರಿ ಸಂಸ್ಥೆಗಳು ಸಾಮಾನ್ಯ ಜನರ ಸಹಾಯಕ್ಕಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯ.

ಸಹಕಾರಿ ಸಂಸ್ಥೆಗಳ ಪ್ರಗತಿಗಾಗಿ  ಕಾರ್ಯ ಮಾಡುತ್ತಿರುವ ನಿರ್ದೇಶಕ ಮಂಡಳಿ ಹಾಗೂ ಕಾರ್ಮಿಕ ವರ್ಗ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಜತೆಗೆ ಸದಸ್ಯರ ಹಾಗೂ ಗ್ರಾಹಕರ ಬಾಂಧವ್ಯ ಮತ್ತು ವಿಶ್ವಾಸ ಬೆಳೆಸುವ ಕಾರ್ಯ ಮಾಡಬೇಕೆಂದು ಶೇಗುಣಸಿಯ ವಿರಕ್ತಮಠದ ಮಹಾಂತ ದೇವರು ಹೇಳಿದರು.

ಅವರು ಇಂದು ಚಿಕೊಡಿ ತಾಲ್ಲೂಕಿನ ಇಂಗಳಿ ಗ್ರಾಮದಲ್ಲಿರುವ ಮಾಂಜರಿ ಗ್ರಾಮದ ಶ್ರೀ ಲಕ್ಷ್ಮಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯ ಶಾಖೆಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು.

ಈ ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಹಾಗೂ ಮಾಜಿ ಶಾಸಕರಾದ ಕಲ್ಲಪ್ಪ ಮಗೆಣ್ಣವರ್ ವಹಿಸಿದ್ದರು. ಈ ಸಮಾರಂಭಕ್ಕೆ ಅತಿಥಿಯಾಗಿ ಹನುಮಾನ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಪತಿ ಜಾಧವ್, ಜಿ ಪಂ ಸದಸ್ಯರಾದ ಭಾರತಿ ಪವಾರ್, ತಾ ಪ ಸದಸ್ಯರಾದ ಕಾವೇರಿ ಚೌಗಲಾ, ಸಂಸ್ಥೆಯ ಅಧ್ಯಕ್ಷರಾದ ಜಿನ್ನಪ್ಪ ಶೇಡಬಾಳ, ಅಣ್ಣಾಸಾಹೇಬ ಪವಾರ್, ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಮೇಶ್ ಪವಾರ್, ಅಜಿತ್ ಚಿಗರೆ ಸುಭಾಷ ಜುಗುಳ ಹಾಜರಿದ್ದರು.

Home add -Advt

ಸಂಸ್ಥೆಯ ನೂತನ ಕಟ್ಟಡದ ಉದ್ಘಾಟನೆಯನ್ನು ಸ್ವಾಮೀಜಿಗಳ ಹಸ್ತದಿಂದ ಮಾಡಲಾಯಿತು. ಈ ವೇಳೆ ಶ್ರೀಪತಿ ಜಾಧವ್, ಅಣ್ಣಾಸಾಹೇಬ ಪವಾರ, ಕಲ್ಲಪ್ಪಣ್ಣ ಮಗೆಣ್ಣವರ್, ಅಜಿತ್ ಚಿಗರೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button