Belagavi NewsBelgaum NewsKannada NewsKarnataka News

*ಬೆಳಗಾವಿ ವಿಭಾಗದ ವಾಕರಸಾಸಂಸ್ಥೆಯ ಹೆಚ್ಚುವರಿ ಬಸ್‌ಗಳ ಕಾರ್ಯಾಚರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಾಕರಸಾಸಂಸ್ಥೆ ಬೆಳಗಾವಿ ಹಾಗೂ ಉಪನಗರಗಳಿಂದ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೆ.07 ರಿಂದ 18 ರವರೆಗೆ ಅನಗೋಳ, ವಡಗಾವ, ಮಜಗಾಂವ, ಮಂಟಮೂರಿ, ಗುರುಪ್ರಸಾದ ಕಾಲನಿ, ಸಹ್ಯಾದ್ರಿನಗರ ಬಡವಣೆ ಹಾಗೂ ಯಳ್ಳೂರ ಮಾರ್ಗವಾಗಿ ಹೆಚ್ಚುವರಿ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ.

ಅಂತೆಯೇ ಬೆಳಗಾವಿ ವಿಭಾಗದ ವ್ಯಾಪ್ತಿಗೆ ಒಳಪಡುವ ಬೈಲಹೊಂಗಲ, ಖಾನಾಪೂರ ಘಟಕಗಳ ವಿವಿಧ ಮಾರ್ಗಗಳಿಂದ ಮತ್ತು ಗೋಕಾಕ, ಕೊಲ್ಲಾಪೂರ,ಚಿಕ್ಕೋಡಿ ಮುಂತಾದ ಮಾರ್ಗಗಳಿಂದ ಬೆಳಗಾವಿ ನಗರಕ್ಕೆ ಸಾರ್ವಜನಿಕ ಗಣಪತಿ ಮೂರ್ತಿಗಳ ವೀಕ್ಷಣೆಗಾಗಿ ಬರುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ತಡರಾತ್ರಿ ವರೆಗೆ ಪ್ರತಿ ಘಟಕದಿಂದ 2 ರಿಂದ 3 ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ವಿಭಾಗದ ವಾಕರಸಾಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button