ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಪಕ್ಷಗಳಿಗೆ ವಿಷಯ ಇಲ್ಲವಾಗಿದೆ. ವಿರೋಧ ಪಕ್ಷಗಳು ಸುಳ್ಳು ಆರೋಪ ಮಾಡುತ್ತಿವೆ ಸಂಪೂರ್ಣವಾಗಿ ವಿರೋಧ ಪಕ್ಷಗಳು ಜವಾಬ್ದಾರಿ ಮರೆತಿದ್ದಾರೆ. ಇದನ್ನೆಲ್ಲ ರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ತೃಪ್ತಿಕರವಾಗಿಲ್ಲ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ತೀರುಗೇಟು ನೀಡಿದ ಅವರು, ವಿರೋಧ ಪಕ್ಷದವರು ಜ್ವಲಂತ ವಿಷಯಗಳ ಕುರಿತು ಮಾತನಾಡಿಲ್ಲ.ಅವರ ಕಾಲದ ಹಗರಣ ಭ್ರಷ್ಟಾಚಾರ ಮಾಡಿರೋದು ವಕ್ಪ್ ನಿಂದ ಹಿಡಿದು ಕೊರೋನ ಹಗರಣ ಹೊರಗೆ ಬರುತ್ತವೆಂದು ಅವರು ಜನರಿಗೆ ಮುಖ ತೋರಿಸದಂತಾಗಿದೆ. ಎಲ್ಲ ವಿಚಾರಗಳ ಕುರಿತು ಸದನದಲ್ಲಿ ಸಿಎಂ ಉತ್ತರ ನೀಡುತ್ತಾರೆ. ನಮ್ಮ ಸರ್ಕಾರ ಅಭಿವೃದ್ಧಿ ಪರವಾಗಿದೆ. ಜನರ ಜೊತೆಗೆ ನಾವಿದ್ದೇವೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ