Latest

NPS ನೌಕರರ ಮೇಲೆ ಷಡಕ್ಷರಿ ಕಡೆಯವರಿಂದ ಹಲ್ಲೆ ಆರೋಪ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಸಂಬಂಧ ಹಾಗೂ ವೇತನ ಪರಿಷ್ಕರಣೆ ವಿಚಾರವಾಗಿ ರಾಜ್ಯ ಸರಕಾರಿ ನೌಕರರ ಸಂಘ ಕರೆದಿದ್ದ ತುರ್ತು ಸಭೆಯಲ್ಲಿ ಸಮರ್ಪಕವಾದ ಚರ್ಚೆಗಳನ್ನು ನಡೆಸದೆ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿರುವುದನ್ನು ವಿರೋಧಿಸಿದ್ದಕ್ಕಾಗಿ ಎನ್‌ಪಿಎಸ್‌ ನೌಕರರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಎನ್‌ಪಿಎಸ್‌ ನೌಕರರು ಆರೋಪಿಸಿದ್ದಾರೆ.

ಈ ಸಂಬಂಧ ಎನ್‌ಪಿಎಸ್‌ ನೌಕರರ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ ಹಾಗೂ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ನೇತೃತ್ವದಲ್ಲಿ ನೌಕರರ ಸಂಘದ ದ್ವಾರದಲ್ಲಿ ಎನ್‌ಪಿಎಸ್ ನೌಕರರು ಪ್ರತಿಭಟನೆ ನಡೆಸಿದರು.

ಷಡಾಕ್ಷರಿ ಬೆಂಬಲಿತ ಕೆಲವರು ಎನ್‌ಪಿಎಸ್‌ ನೌಕರರ ಸಂಘದ ಸದಸ್ಯರ  ಹಲ್ಲೆ ನಡೆಸಿದ್ದಾರೆ. ಎನ್‌ಪಿಎಸ್ ಟೀ-ಶರ್ಟ್ ಧರಿಸಿದ್ದವರನ್ನು ನಿರ್ದಿಷ್ಟವಾಗಿ ಗುರುತಿಸಿ ಅವರ ಮೇಲೆ ಹಲ್ಲೆ ಮಾಡಲಾಗಿದೆ. ಸಭೆಯಲ್ಲಿದ್ದ ಮಹಿಳಾ ನೌಕರರನ್ನೂ ನಿಂದಿಸಲಾಗಿದೆ ಎಂದು ಆರೋಪಿಸಿದರು.

“ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರು ಮಾರ್ಚ್ 2022ರ ಮಾರ್ಚ್ ನಲ್ಲಿ ಕೇಂದ್ರ ಮಾದರಿ ವೇತನ ಕೊಡಿಸುವುದಾಗಿ ಹೇಳಿದ್ದರು. ಅದಾದ ನಂತರ ಎನ್‌ಪಿಎಸ್ ಹೋರಾಟ  ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ್ದರು.  ಇದಕ್ಆಕೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಜಾಹೀರಾತು ಸಹ ನೀಡಿ ಹಣ ವ್ಯಯಿಸಲಾಯಿತು. ನಂತರ ಒಂದೇ ಸಮನೆ ನಿರ್ಧಾರ ಉಲ್ಟಾ ಹೊಡೆದು ಕೇಂದ್ರ ಮಾದರಿ ಇದ್ದುದು ರಾಜ್ಯ ಮಾದರಿಯಾಗಿ ತಿದ್ದುಪಡಿಗೊಂಡಿತು ಎಂದು ಎನ್‌ಪಿಎಸ್‌ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ದೂರಿದರು.

ಏಳನೇ ವೇತನ ಆಯೋಗವನ್ನು ಈ ಬಜೆಟ್‌ನಲ್ಲಿಯೇ ಜಾರಿ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ಷಡಕ್ಷರಿ ದಿಕ್ಕು ತಪ್ಪಿಸಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಇದಕ್ಕೆ ಒಂದು ನಯಾಪೈಸೆ ಕೂಡ ನೀಡಿಲ್ಲ. ತಮ್ಮ ವಚನಭ್ರಷ್ಟತೆ ಮರೆಮಾಚಿಕೊಳ್ಳಲು ಷಡಕ್ಷರಿಯವರು ನಮ್ಮನ್ನು ಹೋರಾಟದ ರೂಪುರೇಷೆ ನಿರ್ಧರಿಸುವ ನೆಪದಲ್ಲಿ ಕರೆದು     ಹಲ್ಲೆ ನಡೆಸಲು ಕಾರಣವಾಗಿದ್ದಾರೆ  ಎಂದು ಶಾಂತರಾಮ್ ದೂರಿದರು.

“ನಮ್ಮ ಬೇಡಿಕೆ ಬಗ್ಗೆ ಪ್ರಶ್ನಿಸಿದಾಗ ಉಡಾಫೆ ಮಾತನಾಡಿರುವ ಷಡಕ್ಷರಿ,  ಚರ್ಚೆ ಮಾಡಲು ಅವಕಾಶ ನೀಡದೆ ತಮ್ಮ ಬೆಂಬಲಿಗರನ್ನು ಬಿಟ್ಟು ಹಲ್ಲೆ ಮಾಡಿಸಿ ನಮ್ಮನ್ನು ಹೊರದಬ್ಬಿದ್ದಾರೆ. ಈ ವೇಲೆ ಷಡಕ್ಷರಿ ಏನೂ ಗೊತ್ತಿಲ್ಲದವರಂತೆ ಮೌನ ತಳೆದಿರುವುದು ಖಂಡನಾರ್ಹ” ಎಂದರು.

ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ  ಮಾತನಾಡಿ ಇದೊಂದು ವ್ಯವಸ್ಥಿತ ಸಂಚಾಗಿದ್ದು ಈ ಕ್ರಮದ ವಿರುದ್ಧ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ಪೂರ್ವಾಭ್ಯಾಸದಿಂದಲೇ ಪರಿಣತಿ ಸಾಧ್ಯ

https://pragati.taskdun.com/expertise-is-possible-only-through-practice/

ಸಮಾಜಘಾತುಕ ಚಟುವಟಿಕೆ; ಬೆಳಗಾವಿಯಿಂದ ಇಬ್ಬರು ಗಡಿಪಾರು

https://pragati.taskdun.com/antisocial-activity-two-exiles-from-belagavi/

ನಿಗಮ ಸ್ಥಾಪನೆಗಾಗಿ ಸರಕಾರಕ್ಕೆ ಅಭಿನಂದಿಸಿದ ಸಮುದಾಯಗಳು

https://pragati.taskdun.com/the-communities-congratulated-the-government-for-setting-up-the-corporation/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button