ಪ್ರಗತಿವಾಹಿನಿ ಸುದ್ದಿ: ಭಾರತ ಕೆನಡಾದ ಹೈಕಮಿಷನರ್ ಸ್ಟೀವರ್ಟ್ ರಾಸ್ ವೀಲರ್ ಮತ್ತು ಇತರೆ ಐದು ರಾಜತಾಂತ್ರಿಕರನ್ನು ಹೊರಹಾಕಿ ಭಾರತ ಆದೇಶ ಹೊರಡಿಸಿದೆ.
ಈ ಕೆನಡಾ ಪ್ರತಿನಿಧಿಗಳು ಅಕ್ಟೋಬರ್ 19 ರ ಮಧ್ಯರಾತ್ರಿಯೊಳಗೆ ಭಾರತದಿಂದ ಜಾಗ ಖಾಲಿ ಮಾಡುವಂತೆ ಸೂಚಿಸಲಾಗಿದೆ. ಆ ಮೂಲಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣ ಹದಗೆಟ್ಟಿದೆ.
ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯ ಪ್ರಕರಣದಲ್ಲಿ ಭಾರತೀಯ ಹೈಕಮಿಷನರ್ ಮತ್ತು ಇತರ ರಾಜತಾಂತ್ರಿಕರು ಈ ಹತ್ಯೆಯ ಹಿಂದಿರಬಹುದಾದ ವ್ಯಕ್ತಿಗಳು ಎಂದು ಕೆನಡಾ ಹೇಳಿಕೆ ನೀಡಿದ್ದು, ಈ ಹೇಳಿಕೆ ನೀಡಿದ ಕೆಲ ಗಂಟೆಗಳ ನಂತರ ಭಾರತ ಕೆನಡಾದ ರಾಜತಾಂತ್ರಿಕರನ್ನು ಕರೆಸಿ ಎಚ್ಚರಿಕೆ ನೀಡಿತ್ತು.
ಭಾರತದಲ್ಲಿರುವ ಕೆನಡಾದ ಡೆಪ್ಯುಟಿ ಹೈ ಕಮಿಷನರ್ ಸ್ಟೀವರ್ಟ್ ವೀಲರ್ ರನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕೆನಡಾದ ನಡೆಯ ಬಗ್ಗೆ ವಿವರಣೆ ನೀಡುವಂತೆ ತಾಕೀತು ಮಾಡಿತ್ತು. ಆದ್ರೆ ಸರಿಯಾದ ವಿವರಣೆ ನೀಡದ ಹಿನ್ನಲೆ ಕೆನಡಾದ ಹೈಕಮಿಷನರ್ ಸ್ಟೀವರ್ಟ್ ರಾಸ್ ವೀಲರ್ ಮತ್ತು ಇತರೆ ಐದು ರಾಜತಾಂತ್ರಿಕರನ್ನು ಭಾರತದಿಂದ ಗಂಟು ಮೂಟೆ ಕಟ್ಟುವಂತೆ ಭಾರತ ಆದೇಶಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ