GIT add 2024-1
Beereshwara 33

ಕೆಎಲ್‌ಎಸ್ ಜಿಐಟಿಯಲ್ಲಿ ಪ್ರಾಜೆಕ್ಟ್ ಪ್ರದರ್ಶನ ಮೇಳ ಆಯೋಜನೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯವು ಮೇ 11 ರಂದು  ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಪ್ರಾಜೆಕ್ಟಗಳ ಪ್ರದರ್ಶನ “ಪ್ರಾಜೆಕ್ಟ್ ಎಕ್ಸ್‌ಪೋ-2024” ಆಯೋಜಿಸುತ್ತಿದೆ. ಈ ಕಾರ್ಯಕ್ರಮವನ್ನು ಬೆಳಗಾವಿಯ ಎಕೆಪಿ ಫೆರೋಕಾಸ್ಟ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ಪರಾಗ್  ಭಂಡಾರೆ ಅವರು  ಉದ್ಘಾಟಿಸಲಿದ್ದಾರೆ.  

Emergency Service

ಪ್ರಾಜೆಕ್ಟ್ ಎಕ್ಸ್‌ಪೋ-2023 ರಲ್ಲಿ ಒಟ್ಟು 250  ಹೆಚ್ಚು ಎಂಜಿನಿಯರಿಂಗ್‌ ಮತ್ತು ಆರ್ಕಿಟೆಕ್ಚರ್‌ ವಿದ್ಯಾರ್ಥಿಗಳು  ಅಭಿವೃದ್ಧಿಪಡಿಸಿದ   ಆರ್ಟಿಫಿಷಿಯಲ್  ಇಂಟೆಲಿಜೆನ್ಸ್ , ಐಒಟಿ, ಪಿಎಲ್‌ಸಿ, ಇಂಧನ ಸಂರಕ್ಷಣೆ, ವಿದ್ಯುತ್ ವ್ಯವಸ್ಥೆಗಳು, ನೆಟ್‌ವರ್ಕಿಂಗ್, ಮಷೀನ್ ಲರ್ನಿಂಗ್, ವೆಬ್ ತಂತ್ರಜ್ಞಾನಗಳು, ಯಂತ್ರ ವಿನ್ಯಾಸ, ಉತ್ಪಾದನೆ, ಥರ್ಮಲ್ ಎಂಜಿನಿಯರಿಂಗ್, ತ್ಯಾಜ್ಯ ನಿರ್ವಹಣೆ, ಕೃಷಿ, ಸ್ಟ್ರಕ್ಚರಲ್ ಇಂಜಿನಿಯರಿಂಗ್, ನಿರ್ಮಾಣ ಸಾಮಗ್ರಿಗಳು ಮತ್ತು ನಿರ್ವಹಣೆ, ಮಣ್ಣು ಮತ್ತು ನೀರಿನ ಸಂರಕ್ಷಣೆ, ಸಾರಿಗೆ ಎಂಜಿನಿಯರಿಂಗ್, ನ್ಯಾನೋ ತಂತ್ರಜ್ಞಾನ, ಉಪಗ್ರಹ ಚಿತ್ರ ಸಂಸ್ಕರಣೆ ಮತ್ತು ಇನ್ನೂ ವಿವಿಧ ಆಧುನಿಕ ಹಾಗೂ ಉನ್ನತ ತಂತ್ರಜ್ಞಾನ ಬಳಸಿ, ಅಭಿವೃದ್ಧಿಪಡಿಸಿದ  ಪ್ರಾಜೆಕ್ಟ್ ಗಳನ್ನು  ಈ ಮೇಳದಲ್ಲಿ ಪ್ರದರ್ಶಿಸಲಿದ್ದಾರೆ.

 ಈ  ಪ್ರಾಜೆಕ್ಟ್ ಪ್ರದರ್ಶನ ಮೇಳವು ಬೆಳಗಾವಿ ಮತ್ತು ಸುತ್ತಮುತ್ತಲಿನ ನಾಗರಿಕರು, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಆಸಕ್ತರಿಗೆ  ವೀಕ್ಷಣೆಗೆ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ತೆರೆದಿರುತ್ತದೆ ಎಂದು ಕೆಎಲ್‌ಎಸ್ ಜಿಐಟಿಯ ಪ್ರಾಂಶುಪಾಲರಾದ ಡಾ. ಎಂ . ಎಸ್ . ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Laxmi Tai add
Bottom Add3
Bottom Ad 2