Latest

ಗೂಬೆಗಳಿಗೂ ಬಂತು ಫ್ರೀ ವೆಡ್ಡಿಂಗ್ ಫೋಟೊ ಶೂಟ್

ಪ್ರಗತಿವಾಹಿನಿ ಸುದ್ದಿ: ಮುಂಬೈ: ಎರಡು ಗೂಬೆಗಳು ಪರಸ್ಪರ ಮುತ್ತಿಕ್ಕುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಫೋಟೊ ಪೋಸ್ಟ್ ಮಾಡಿದ ಐಎಫ್‌ಎಸ್ ಅಧಿಕಾರಿ ಇದು ಗೂಬೆಗಳ ಫ್ರೀ ವೆಡ್ಡಿಂಗ್ ಫೋಟೊ ಶೂಟ್ ಎಂದು ತಮಾಷೆಯ ತಲೆ ಬರಹ ನೀಡಿದ್ದಾರೆ.

ಐಎಫ್‌ಎಸ್ ಅಧಿಕಾರಿ ಮಧುಮಿತಾ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಗೂಬೆಗಳು ಮುತ್ತಿಕ್ಕುತ್ತಿರುವ ಫೋಟೊಗಳ ಕೋಲಾಜ್ ಅನ್ನು ಪೋಸ್ಟ್ ಮಾಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿ ಈ ದೃಶ್ಯ ಕಂಡುಬಂದಿದ್ದಾಗಿ ಅವರು ಹೇಳಿದ್ದಾರೆ. ಅಶ್ವಿನ್ ಕೆಂಕರೆ ಎಂಬುವವರು ಈ ಫೋಟೊ ತೆಗೆದಿದ್ದಾಗಿ ಅವರು ತಿಳಿಸಿದ್ದಾರೆ.

Related Articles

ಗೂಬೆಗಳ ಫ್ರೀ ವೆಡ್ಡಿಂಗ್ ಫೋಟೊ ಶೂಟ್ ಎಂಬ ತಲೆಬರಹದಡಿ ಪೋಸ್ಟ್ ಮಾಡಲಾಗಿರುವ ಈ ಕೋಲಾಜ್ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಅಪಾರ ಮೆಚ್ಚುಗೆ ಗಳಿಸುತ್ತಿದೆ. ಮನುಷ್ಯರಂತೆಯೇ ಪ್ರಾಣಿ ಪಕ್ಷಿಗಳೂ ತಮ್ಮ ಭಾವನೆಗಳನ್ನು ಹೇಗೆ ಹಂಚಿಕೊಳ್ಳುತ್ತವೆ ಎಂಬುದಕ್ಕೆ ಈ ಫೋಟೊ ನಿದರ್ಶನದಂತಿದೆ.

ನಗರಸಭೆಗಳಿಗೆ ಇನ್ನು ಮುಂದೆ ಲೆಕ್ಕಾಧಿಕಾರಿಗಳ ನೇಮಕ

Home add -Advt

Related Articles

Back to top button