
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಷ್ಟದ ಸಮಯದಲ್ಲಿ ನೆರವಿನ ಹಸ್ತ ಚಾಚುವಲ್ಲಿ ಸದಾ ಮುಂಚೂಣಿಯಲ್ಲಿರುವ ಗೋಪಾಲ ಜಿನಗೌಡ ಫೌಂಡೇಶನ್ ವತಿಯಿಂದ ಕೊರೊನಾ ಸಂಕಷ್ಟದಲ್ಲಿ ಆಕ್ಸಿಜನ್ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗಾಗಿ ಐದು ಆಕ್ಸಿಜನ್ ಕಾನ್ಸಂಟ್ರೇಟರ್ಸಗಳನ್ನು ಶಾಸಕ ಅಭಯ ಪಾಟೀಲ್ ಅವರಿಗೆ ಹಸ್ತಾಂತರಿಸಲಾಯಿತು.
ಬೆಳಗಾವಿ ನಗರದಲ್ಲಿ ಅನೇಕ ವ್ಯಕ್ತಿಗಳು ಕೊರೋನಾ ಸೊಂಕಿಗೆ ಒಳಗಾಗಿದ್ದಾರೆ. ಈ ಸೋಂಕಿತರಲ್ಲಿ ಅನೇಕರು ಆಕ್ಸಿಜನ್ ಕೊರತೆ ಎದುರಿಸುತ್ತಿರುವುದನ್ನು ಮನಗೊಂಡು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಅವರು ಸೋಂಕಿತರಿಗೆ ಉಚಿತ ಆಕ್ಸಿಜನ್ ನೀಡುವ ಯೋಜನೆಯೊಂದನ್ನು ಜಾರಿಗೆ ತಂದಿದ್ದಾರೆ. ಮನೆಯಲ್ಲಿ ಆರೈಕೆ ಪಡೆಯುತ್ತಿರುವ ಕೊರೋನಾ ಸೊಂಕಿತರಿಗೆ ಆಕ್ಸಿಜನ್ ಕೊರತೆ ಉಂಟಾದಾಗ ಅಂತಹವರಿಗೆ ಆಕ್ಸಿಜನ್ ಕಾನ್ಸಂಟ್ರೇಟರ್ಸ ಒದಗಿಸಲಾಗುತ್ತದೆ. ಈ ಯೋಜನೆಗೆ ಗೋಪಾಲ ಜಿನಗೌಡ ಫೌಂಡೇಶನ್ ಸಂಸ್ಥೆ ಕೈ ಜೋಡಿಸಿದ್ದು, ಇಂದು ಸುಸಜ್ಜಿತ ಐದು ಆಕ್ಸಿಜನ್ ಕಾನ್ಸಂಟ್ರೇಟರ್ಸ್‍ಗಳನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಭಯ ಪಾಟೀಲ್, ಗೋಪಾಲ ಜಿನಗೌಡ ಫೌಂಡೇಶನ್ ಸಂಸ್ಥೆಯ ಚೇರಮನ್‍ರಾದ ಗೋಪಾಲ ಜಿನಗೌಡ ಅವರು ಸಾಮಾಜಿಕ ಆಪತ್ತುಗಳು ಬಂದ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ಸಹಾಯ ಮಾಡುತ್ತ ಬಂದಿದ್ದಾರೆ. ಈ ಹಿಂದೇಯೂ ಸಹ ಅನೇಕ ಸಹಾಯವನ್ನು ನೀಡಿದ್ದಾರೆ. ಇದೀಗ ಐದು ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಕೊಡುಗೆಯಾಗಿ ನೀಡುವ ಮೂಲಕ ತಮ್ಮ ಹೃದಯವಿಶಾಲತೆಯನ್ನು ತೋರಿದ್ದು, ಅವರಿಗೆ ನಾನು ಚಿರುಋಣಿಯಾಗಿದ್ದೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಗೋಪಾಲ ಜಿನಗೌಡ ಪೌಂಡೇಶನ್ ಕಾರ್ಯದರ್ಶಿ ಸಂದೀಪ ಚಿಪ್ರೆ, ಪದಾಧಿಕಾರಿಗಳಾದ ಅಭಿಷೇಕ ಜಿನಗೌಡ, ಮಹಾವೀರ ಜಿನಗೌಡ, ಪ್ರಮೋದ ಜಿನಗೌಡ , ಅಶೋಕ ನಾಯಿಕ, ರಾಜೇಂದ್ರ ಜಕ್ಕನ್ನವರ, ಅಭಯ ಅವಲಕ್ಕಿ ಮೊದಲಾದವರು ಉಪಸ್ಥಿತರಿದ್ದರು.
ಮೇ 27 ರಿಂದ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ- ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ