
ಪ್ರಗತಿವಾಹಿನಿ ಸುದ್ದಿ: ಭಾರತೀಯ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ, ರಾಜ್ಯಸಭಾ ಸದಸ್ಯೆ ಪಿ.ಟಿ.ಉಷಾ ಅವರ ಪತಿ ವಿ.ಶ್ರೀನಿವಾಸನ್ ವಿಧಿವಶರಾಗಿದ್ದಾರೆ.
64 ವರ್ಷದ ಶ್ರೀನಿವಾಸನ್ ಕೇರಳದ ತಿಕ್ಕೋಡಿ ಪೆರುಮಾಳ್ ಪುರಂ ನಲ್ಲಿರುವ ಮನೆಯಲ್ಲಿ ತಡರಾತ್ರಿ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಅವರನ್ನು ಬದಕಿಸಲು ಸಾಧ್ಯವಾಗಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ವಿ.ಶ್ರೀನಿವಾಸನ್, ದೂರದ ಸಂಬಂಧಿಯಾಗಿದ್ದ ಪಿ.ಟಿ.ಉಷಾ ಅವರನ್ನು 1991ರಲ್ಲಿ ವಿವಾಹವಾಗಿದ್ದರು. ದಂಪತಿಗೆ ಓರ್ವ ಮಗನಿದ್ದಾನೆ. ಶ್ರೀನಿವಾಸನ್, ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಡೆಪ್ಯೂಟಿ ಎಸ್ ಪಿಯಾಗಿ ನಿವೃತ್ತಿಯಾಗಿದ್ದರು.



