Latest

ಕೋವಿಡ್ 2ನೇ ಅಲೆಯ ಸಪೋರ್ಟ್ ಪ್ಯಾಕೇಜ್ (ಸಮಗ್ರ ಮಾಹಿತಿ)

ಯಡಿಯೂರಪ್ಪ ಅವರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಲಾಕ್ಡೌನ್ ವಿಸ್ತರಣೆ ಸಂಬಂಧ ಮೇ 23ರಂದು ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಹಿರಿಯ ಸಚಿವರು ಹಾಗೂ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಅವರು ಕೆಲವು ವರ್ಗಗಳಿಗೆ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಒಟ್ಟೂ 1250 ಕೋಟಿ ರೂ.ಗಳ ಪ್ಯಾಕೇಜ್ ಇದಾಗಿದೆ.

ಹೂವು ಬೆಳೆಗಾರರಿಗೆ  10 ಸಾವಿರ ರೂ., ರಸ್ತೆ ಬದಿ ವ್ಯಾಪಾರಿಗಳಿಗೆ 2 ಸಾವಿರ ರೂ., ಟ್ಯಾಕ್ಸಿ ಚಾಲಕರಿಗೆ 3 ಸಾವಿರ ರೂ., ಕಲಾವಿದರಿಗೆ 3 ಸಾವಿರ ರೂ. ನೀಡುವುದಾಗಿ ತಿಳಿಸಿದ್ದಾರೆ.

ಫಲಾನುಭವಿಗಳಿಗೆ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಯಡಿಯೂರಪ್ಪ ಅವರು ನೀಡಿರುವ ಸಂಪೂರ್ಣ ಮಾಹಿತಿ ಇಲ್ಲಿದೆ –

ಕೋವಿಡ್ 2ನೇ ಅಲೆಯ ಸಪೋರ್ಟ್ (ಬೆಂಬಲ) ಪ್ಯಾಕೇಜ್
• ಕೋವಿಡ್-19 ಸಾಂಕ್ರಾಮಿಕದ 2ನೇ ಅಲೆಯ ತೀವ್ರತೆಯಿಂದಾಗಿ, ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ಸಲುವಾಗಿ, ಹಾಗೂ ರಾಜ್ಯದ ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರವು ಮೇ 24, 2021 ರವರೆಗೆ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸುವುದು ಅನಿವಾರ್ಯವಾಗಿತ್ತು.
• ಈ ನಿರ್ಬಂಧನೆಗಳಿಂದ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಕಡಿಮೆಗೊಳಿಸಲು ಮತ್ತು ಸಾರ್ವಜನಿಕರ ದೈನಂದಿನ ಅಗತ್ಯತೆಗಳಿಗಾಗಿ ಕೃಷಿ, ಸರಕು ಸಾಗಾಣಿಕೆ, ಅಗತ್ಯ ಸೇವೆ, ಕಟ್ಟಡ ಕಾಮಗಾರಿಗಳು (in-situ), ಹೋಟೆಲ್ ಉದ್ಯಮ (ಡೆಲಿವರಿ ಮಾತ್ರ), ಇ-ಕಾಮರ್ಸ್, ಮನೆ ಬಾಗಿಲಿಗೆ ತರಕಾರಿ ಮತ್ತು ಹಣ್ಣುಗಳನ್ನು ತಲುಪಿಸುವ ವ್ಯವಸ್ಥೆ, ಅಗತ್ಯ ಸೇವೆಗಾಗಿ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಸೇವೆ ಮುಂತಾದವುಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
• ಬೆಳಗ್ಗೆ 06 ರಿಂದ 10 ಘಂಟೆಯವರೆಗೆ ದಿನಸಿ, ಹಣ್ಣು, ತರಕಾರಿ, ಹೂವು, ಹಾಲು ಉತ್ಪನ್ನಗಳು ಮತ್ತು ಇನ್ನಿತರೆ ಅಗತ್ಯ ವಸ್ತುಗಳ ಖರೀದಿಗಾಗಿ ಅವಕಾಶ ಮಾಡಿಕೊಡಲಾಗಿದೆ.
• ಕೊರೋನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಅನಿವಾರ್ಯವಾಗಿ ವಾಣಿಜ್ಯ ಚಟುವಟಕೆಗಳಿಗೆ ನಿರ್ಬಂಧ ವಿಧಿಸಿದ್ದು, ಇದರಿಂದಾಗಿ ಜನರು ಆಹಾರವಿಲ್ಲದೇ ಸಂಕಷ್ಟಕ್ಕೆ ಸಿಲುಕಬಾರದೆಂದು ಸರ್ಕಾರವು ಈ ಕೆಳಗಿನಂತೆ ಜನರ ನೆರವಿಗೆ ಧಾವಿಸಿದೆ.
• ಕೋವಿಡ್ 1 ನೇ ಅಲೆಯಲ್ಲಿ ನಮ್ಮ ಸರ್ಕಾರವು ಹಲವಾರು ವಲಯಗಳಿಗೆ ಆರ್ಥಿಕ ಪ್ಯಾಕೇಜ್ನ್ನು ನೀಡಿರುತ್ತದೆ.
• ಆದಾಗ್ಯೂ, ಪ್ರಸಕ್ತ ನಿರ್ಬಂಧಗಳಿಂದ ಹಲವು ಅಸಂಘಟಿತ ವಲಯಗಳಿಗೆ ಹಾಗೂ ರೈತರಿಗೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ಪರಿಣಾಮ ತಗ್ಗಿಸಲು ನಮ್ಮ ಸರ್ಕಾರವು ಈ ಕೆಳಗಿನಂತೆ ಸಹಾಯ ಘೋಷಿಸುತ್ತಿದ್ದೇನೆ.
ತೋಟಗಾರಿಕೆ ಇಲಾಖೆ
1. ಹೂವು ಬೆಳೆಗಾರರಿಗೆ ಪ್ರತಿ ಹೆಕ್ಟೇರ್ ಹೂವು ಹಾನಿಗೆ ರೂ.10,000/- ರಂತೆ ಸಹಾಯ ನೀಡಲಾಗುವುದು. ಇದರಿಂದ ಸುಮಾರು 20,000 ರೈತರಿಗೆ ಸಹಕಾರಿಯಾಗಲಿದೆ.  Rs. 12.73 Crore.
2. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಉಂಟಾಗಿರುವ ನಷ್ಟಕ್ಕೆ ಗರಿಷ್ಠ 1 ಹೆಕ್ಟೇರ್ಗೆ ಮಿತಿಗೊಳಿಸಿ ಪ್ರತಿ ಹೆಕ್ಟೇರ್ಗೆ ರೂ.10,000/- ರಂತೆ ಸಹಾಯ ಒದಗಿಸಲಾಗುವುದು.  ಇದರಿಂದ ಸುಮಾರು 69,000 ರೈತರಿಗೆ ಸಹಕಾರಿಯಾಗಲಿದೆ. Rs.69.00 Crore
ಸಾರಿಗೆ ಇಲಾಖೆ
3. ಆಟೋ ಮತ್ತು ಟ್ಯಾಕ್ಸಿ ಹಾಗೂ ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ (ಲೈಸೆನ್ಸ್ ಹೊಂದಿದ ಹಾಗೂ ನೋಂದಣಿ ಮಾಡಿಸಿದ) – ರೂ. 3000/-  ಪ್ರತಿ ಚಾಲಕರಿಗೆ (ಒಟ್ಟು ಫಲಾನುಭವಿಗಳು – 2.10 ಲಕ್ಷ) Rs.63.00 Crore
ಕಾರ್ಮಿಕ ಇಲಾಖೆ
4. ಕಟ್ಟಡ ಕಾರ್ಮಿಕರಿಗೆ ತಲಾ ರೂ. 3000/- (ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಣಿ ಮಾಡಿಸಿದ ಕಾರ್ಮಿಕರಿಗೆ) Rs.494.00 Crore
5. ಅಸಂಘಟಿತ ಕಾರ್ಮಿಕರಿಗೆ ತಲಾ ರೂ.2,000/- (ಕ್ಷೌರಿಕರು, ಅಗಸರು, ಟೈಲರ್ಗಳು, ಹಮಾಲಿಗಳು, ಚಿಂದಿ ಆಯುವವರು, ಕುಂಬಾರರು, ಭಟ್ಟಿ ಕಾರ್ಮಿಕರು, ಅಕ್ಕಸಾಲಿಗರು, ಮೆಕ್ಯಾನಿಕ್ಗಳು, ಕಮ್ಮಾರರು, ಗೃಹ ಕಾರ್ಮಿಕರು, ಚಮ್ಮಾರರು  (ಒಟ್ಟು ಫಲಾನುಭವಿಗಳು – 3.04 ಲಕ್ಷ)  Rs.60.89 Crore
6. ರಸ್ತೆ ಬದಿಯ ವ್ಯಾಪರಸ್ಥರು – ತಲಾ ರೂ.2,000/- (ಆತ್ಮ ನಿರ್ಭರ್ ನಿಧಿಯಲ್ಲಿ ನೊಂದಣಿ ಹೊಂದಿದವರು) (ಒಟ್ಟು ಫಲಾನುಭವಿಗಳು – 2.20 ಲಕ್ಷ)  Rs.44.00 Crore
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
7. ಕಲಾವಿದರು /ಕಲಾ ತಂಡಗಳಿಗೆ ತಲಾ ರೂ.3,000/- (ಒಟ್ಟು ಫಲಾನುಭವಿಗಳು – 16,095) Rs.4.82  Crore
ಸಹಕಾರ ಇಲಾಖೆ
8. ರೈತರ ಮತ್ತು ಸ್ವ ಸಹಾಯ ಸಂಘಗಳು ಮತ್ತು ಭೂ ಅಭಿವೃದ್ಧಿ ಬ್ಯಾಂಕುಗಳಿಂದ ಪಡೆದಿರುವ ಸಣ್ಣ, ಮಧ್ಯಮ ಮತ್ತು ಧೀರ್ಘಾವಧಿಯ ಸಾಲಗಳ  ಮರುಪಾವತಿ ದಿನಾಂಕ: 01-05-2020 ರಿಂದ ಮರುಪಾವತಿಸಬೇಕಾದ ಕಂತುಗಳನ್ನು ದಿನಾಂಕ: 31-07-2021 ವರೆಗೆ ವಿಸ್ತರಿಸಲಾಗಿದೆ.  ಇದರಿಂದ 4.25 ಲಕ್ಷ ರೈತರಿಗೆ ಅನುಕೂಲವಾಗಲಿದೆ.
ಆಹಾರ ಇಲಾಖೆ
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ:
9. ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಮೇ ಮತ್ತು ಜೂನ್ ತಿಂಗಳಿಗೆ ಬಿ.ಪಿ.ಎಲ್. ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳಿಗೆ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಇದಲ್ಲದೆ ರಾಜ್ಯದಲ್ಲಿ ಹೆಚ್ಚುವರಿಯಾಗಿ ಸುಮಾರು 30 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯನ್ನು ನೀಡಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದ ವತಿಯಿಂದ ರೂ.180.00 ಕೋಟಿಗಳ ವೆಚ್ಚ ಭರಿಸಲಾಗುತ್ತಿದೆ.
(ಈ ಯೋಜನೆಯಲ್ಲಿ 1.26 ಕೋಟಿ ಪಡಿತರ ಚೀಟಿಗಳ ಒಟ್ಟು 4.34 ಕೋಟಿ ಫಲಾನುಭವಿಗಳಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ.)   Rs.180.00 Crore
10. ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವ ಜನರಿಗೆ ಪಡಿತರ ಚೀಟಿಯನ್ನು ವಿತರಿಸದೇ ಇದ್ದಲ್ಲಿ ಅಂತಹವರಿಗೂ ಸಹ ಮೇ ಮತ್ತು ಜೂನ್ ಮಾಹೆಗೆ ಪ್ರತಿ ಮಾಹೆಯಾನ ಬಿ.ಪಿ.ಎಲ್. ಅರ್ಜಿದಾರರಿಗೆ ಉಚಿತವಾಗಿ 10 ಕೆ.ಜಿ. ಆಹಾರಧಾನ್ಯ ಹಾಗೂ ಎ.ಪಿ.ಎಲ್. ಅರ್ಜಿದಾರರಿಗೆ ಪ್ರತಿ ಕೆ.ಜಿ.ಗೆ ರೂ.15/- ರಂತೆ 10 ಕೆ.ಜಿ. ಆಹಾರಧಾನ್ಯವನ್ನು ನೀಡಲಾಗುವುದು.
ಇದರಿಂದ ಒಟ್ಟು 3.10 ಲಕ್ಷ ಅರ್ಜಿದಾರರಿಗೆ ಸಹಾಯವಾಗಲಿದೆ.
(ಬಿ.ಪಿ.ಎಲ್. – 3,07 ಲಕ್ಷ & ಎ.ಪಿ.ಎಲ್. -2436)  Rs. 24.00 Crore
ನಗರಾಭಿವೃದ್ಧಿ ಇಲಾಖೆ
11. ಬಿ.ಬಿ.ಎಂ.ಪಿ. ಮತ್ತು ನಗರ ಪ್ರದೇಶಗಳ ವ್ಯಾಪ್ತಿಯಲ್ಲಿನ ಕಾರ್ಮಿಕರು ಹಾಗೂ ಬಡವರು ಆಹಾರವಿಲ್ಲದೇ ಹಸಿವಿನಿಂದ ಬಳಲಬಾರದೆಂದು ಸರ್ಕಾರವು ಇಂದಿರಾ ಕ್ಯಾಂಟೀನ್ನಲ್ಲಿ ಉಚಿತವಾಗಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಇದರಿಂದ ಪ್ರತಿದಿನ ಒಟ್ಟು ನಗರ ಪ್ರದೇಶಗಳ ವ್ಯಾಪ್ತಿಯ 6.00 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗುತ್ತಿದೆ. Rs. 25.00  Crore
ಒಟ್ಟು ಸಹಾಯ Rs.1111.82 Crore
• ಕೋವಿಡ್ ಸೋಂಕಿಗೊಳಗಾದ ರೋಗಿಗಳಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದ ನಿಯೋಜಿಸಿದ (ಖಾಸಗಿ ಮತ್ತು ಸರ್ಕಾರಿ) ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನಿಡಲಾಗುತ್ತಿದೆ.  ಕೋವಿಡ್ 1ನೇ ಮತ್ತು 2ನೇ ಅಲೆಯಲ್ಲಿ ಒಟ್ಟಾಗಿ ಇಲ್ಲಿಯವರೆಗೆ 2.06 ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, ರೂ.956 ಕೋಟಿಗಳಿಗೂ ಹೆಚ್ಚು ಖರ್ಚು ಭರಿಸಲಾಗುತ್ತಿದೆ.
• 18 ರಿಂದ 45 ವರ್ಷದೊಳಗಿನ ಎಲ್ಲಾ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲು ಉದ್ದೇಶಿಸಿದ್ದು, ಈಗಾಗಲೇ 3 ಕೋಟಿ ಡೋಸ್ ಲಸಿಕೆ ಖರೀದಿಗೆ ಆದೇಶ ನೀಡಲಾಗಿದ್ದು, ಇದಕ್ಕಾಗಿ ರೂ. 1000 ಕೋಟಿ ವೆಚ್ಚ ಭರಿಸಲಾಗುತ್ತಿದೆ.
• ಕೋವಿಡ್ ನಿರ್ವಹಣೆಗಾಗಿ ಎಸ್.ಡಿ.ಆರ್.ಎಫ್.  ಹಣವನ್ನು ಪ್ರತಿ ಗ್ರಾಮ ಪಮಚಾಯ್ತಿಗಳಿಗೆ ರೂ.50,000/- ರಂತೆ ಮುಂಗಡವಾಗಿ ನೀಡಲಾಗುವುದು. ಇದರಿಂದ 6,000 ಗ್ರಾಮ ಪಂಚಾಯಿತಿಗಳಿಗೆ ಸಹಕಾರಿಯಾಗಲಿದೆ.
• ಕೋವಿಡ್ ಚಿಕಿತ್ಸೆಗೆ ಅನುಕೂಲವಾಗಲು 2,150 ವೈದ್ಯರನ್ನು 3 ದಿನಗಳೊಳಗಾಗಿ ನೇಮಕಾತಿ ಮಾಡಲಾಗುವುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button