
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿಂದೊಳ್ಳಿ ಗ್ರಾಮದ ಚಂದ್ರಗೌಡ ಬಾಬಾಗೌಡ ಪಾಟೀಲ ಇವರ ಜಮೀನಲ್ಲಿ ರಾಶಿ ಮಾಡಲು ಕೂಡಿಟ್ಟಿದ್ದ ಸುಮಾರು 40 ಚೀಲದ ಬಾಸುಮತಿ ಭತ್ತದ ಬಣವೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.
ಸುವರ್ಣ ಸೌಧದ ಹಿಂದುಗಡೆ ಶೆಗಣಮಟ್ಟಿ ರಸ್ತೆಯ ಭೀಮನ ಪಾದದ ಹತ್ತಿರ ಇರುವ 138/ಬಿ ಸರ್ವೆ ನಂಬರಿನ ಜಮೀನಲ್ಲಿ ಈ ದುರ್ಘಟನೆ ನಡೆದಿದೆ.
ಎರಡು ಭತ್ತದ ಬಣವೆಗಳು ಬೆಂಕಿಗೆ ಆಹುತಿಯಾಗಿವೆ. ಇನ್ನೇನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ತಡರಾತ್ರಿಯಲ್ಲಿ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರೆ ಎಂದು ಶಂಕಿಸಲಾಗಿದೆ.