
ಪ್ರಗತಿವಾಹಿನಿ ಸುದ್ದಿ: 2016ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಪಡೆದ ಕೇರಳ ಮೂಲದ ಉದ್ಯಮಿ ಸುಂದರ್ ಸಿ. ಮೆನನ್ (63) ಎಂಬವರನ್ನು ಹಣಕಾಸು ವಂಚನೆ ಪ್ರಕರಣಗಳ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ಇವರನ್ನು ಬಂಧಿಸಿದ್ದು, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಬಳಿಕ ಜೈಲಿಗೆ ಹಾಕಿದ್ದಾರೆ.
ಮೆನನ್ ನಿರ್ದೇಶಕರಲ್ಲಿ ಒಬ್ಬರಾಗಿರುವ ಎರಡು ಕಂಪನಿಗಳ ಹೆಸರಲ್ಲಿ 7.78 ಕೋಟಿ ರೂ. ಠೇವಣಿ ಸ್ವೀಕರಿಸಿದ್ದು, ಅದನ್ನು ಮೆಚ್ಯುರಿಟಿ ಬಳಿಕ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು 18 ದೂರುಗಳು ದಾಖಲಾಗಿವೆ. ಹೀಗೆ 62ಕ್ಕೂ ಹೆಚ್ಚು ಜನರಿಂದ ಹಣ ಪಡೆದುಕೊಂಡಿದ್ದಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನೂ ಉಲ್ಲಂಘಿ ಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೆನನ್ ಮತ್ತು ಕಂಪನಿಯ ಇತರ ನಿರ್ದೇಶಕರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಪ್ರಸಿದ್ದ ತ್ರಿಶೂರ್ ಪೂರಂ ಆಯೋಜಿಸುವ ತಿರುವಾಂಬಡಿ ದೇವಸ್ವಂ ಅಧ್ಯಕ್ಷರಾಗಿಯೂ ಮೆನನ್ ಕಾರ್ಯನಿರ್ವಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ