
ಪ್ರಗತಿವಾಹಿನಿ ಸುದ್ದಿ: ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಬಾಲಕಿಯ ಕತ್ತಿಗೆ ಚಾಕು ಹಿಡಿದು ಬೆದರಿಕೆ ಹಾಕಿರಿವ ಘಟನೆ ಮಹಾರಾಷ್ಟ್ರದ ಸತಾರಾ ನಗರದ ಕರಂಜೆ ಪ್ರದೇಶದಲ್ಲಿ ನಡೆದಿದೆ.
ಹತ್ತನೇ ತರಗತಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಹಿಂದೆ ಬಿದ್ದಿದ್ದ ಯುವಕನೊಬ್ಬ ಬಾಲಕಿಗೆ ತನ್ನನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಬಾಲಕಿ ನಿರಾಕರಿಸಿದ್ದಕ್ಕೆ ಕೋಪಗೊಂಡಿದ. ಬಾಲಕಿ ಶಾಲೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಆಕೆಯನ್ನು ತಡೆದು ಒಂದು ಕೈಯ್ಯಲ್ಲಿ ಬಾಲಕಿ ಕತ್ತು ಹಿಡಿದು ಮತ್ತೊಂದು ಕೈಯಲ್ಲಿ ಚಾಕು ಹಿಡಿದು ಹೆದರಿಸಿದ್ದಾನೆ. ಹಾಡಹಗಲೇ ಈ ಘಟನೆ ನಡೆದಿದೆ. ಬಾಲಕಿಯನ್ನು ಬಿಡುವಂತೆ ಬಾಲಕಿ ಪೋಷಕರು ಹಾಗೂ ಸ್ಥಳೀಯರು ಎಷ್ಟೇ ಕೇಳಿದರೂ ಬಿಡದ ಯುವಕ ಯಾರಾದರೂ ಹತ್ತಿರ ಬಂದರೆ ಬಾಲಕಿಗೆ ಚಾಕು ಇರಿಯುವುದಾಗಿ ಆವಾಜ್ ಹಾಕಿದ್ದಾನೆ.
ಬೇರೆ ದಾರಿ ಕಾಣದೇ ಸ್ಥಳೀಯ ವ್ಯಕ್ತಿಯೊಬ್ಬರು ಯುವಕನಿಗೆ ಗೊತ್ತಾಗದಂತೆ ರಸ್ತೆಯ ಇನ್ನೊಂದು ಭಾಗದಿಂದ ಕಾಂಪೌಂಡ್ ಜಿಗಿದು ಯುವಕನ ಹಿಂದಿನಿಂದ ಬಂದು ಆತನ ಕೈಲಿದ್ದ ಚಾಕು ಕಸಿದು ಯುವಕನನ್ನು ಹಿಡಿದಿದ್ದಾರೆ. ಬಳಿಕ ಸ್ಥಳದಲ್ಲಿ ಸೇರಿದ್ದ ಜನರು ಬಾಲಕಿಯನ್ನು ರಕ್ಷಿಸಿ, ಯುವಕನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಶಾಹುಪುರಿ ಠಾಣೆ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.