Latest

ಬೆಳಗಾವಿಯಲ್ಲಿ ಒಂದೇ ದಿನ ತ್ರಿ ಶತಕದತ್ತ ಕೊರೋನಾ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಇಂದು ಒಂದೇ ದಿನ 5503 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 1,12,504ಕ್ಕೇರಿದೆ.

ಇಂದು ರಾಜ್ಯದಲ್ಲಿ ಒಟ್ಟೂ 92 ಜನರು ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಒಟ್ಟೂ ಸಾವಿನ ಸಂಖ್ಯೆ 2147 ಆಗಿದೆ.

Home add -Advt

ಇಂದು ಬೆಂಗಳೂರಿನ್ಲಲಿ 2270, ಬಳ್ಳಾರಿ 338, ಬೆಳಗಾವಿ 279, ದಾವಣಗೆರೆ 225, ದಕ್ಷಿಣ ಕನ್ನಡ 208, ಮೈಸೂರಿನಲ್ಲಿ 200 ಜನರಿಗೆ ಸೋಂಕು ಪತ್ತೆಯಾಗಿದೆ.

ಧಾರವಾಡದಲ್ಲಿ 175, ಉಡುಪಿ 173, ಕಲಬುರಗಿ 168, ಶಿವಮೊಗ್ಗ 131, ತುಮಕೂರು 128, ಯಾದಗಿರಿಯಲ್ಲಿ 114 ಪ್ರಕರಣ ದೃಢಪಟ್ಟಿದೆ.

ಚಿಕ್ಕಬಳ್ಳಾಪುರ 96, ಹಾಸನ 95, ಬೀದರ್ 91, ವಿಜಯಪುರ 90, ಕೊಪ್ಪಳ 84, ಉತ್ತರ ಕನ್ನಡ 75, ರಾಯಚೂರು 73, ಮಂಡ್ಯ 70, ಗದಗ 61, ಬಾಗಲಕೋಟೆ 57, ರಾಮನಗರ 56, ಚಿತ್ರದುರ್ಗ 52, ಹಾವೇರಿ 50, ಬೆಂಗಳೂರು ಗ್ರಾಮಾಂತರ 49, ಕೋಲಾರ 34, ಚಿಕ್ಕಮಗಳೂರು 33, ಚಾಮರಾಜನಗರ 20, ಕೊಡಗಿ 8 ಜನರಿಗೆ ಸೋಂಕು ಪತ್ತೆಯಾಗಿದೆ.

ಇಂದು ಬೆಂಗಳೂರಿನಲ್ಲಿ 30, ಕಲಬುರಗಿಯಲ್ಲಿ 10, ದಕ್ಷಿಣ ಕನ್ನಡದಲ್ಲಿ 7, ಮೈಸೂರಲ್ಲಿ 5, ಹಾಸನ, ದಾವಣಗೆರೆಯಲ್ಲಿ 4, ತುಮಕೂರು, ಗದಗ, ಬೆಳಗಾವಿಯಲ್ಲಿ 3 ಜನರು ಸಾವಿಗೀಡಾಗಿದ್ದಾರೆ.

 

Related Articles

Back to top button